ಸೀರೆ ಹಂಚಿ ರಾಜಕೀಯ ಮಾಡ್ಬೇಕಾ?: ಸಿ.ಪಿ.ಯೋಗೇಶ್ವರ್ ವಿರುದ್ದ ಹೆಚ್ಡಿಕೆ ವಾಗ್ದಾಳಿ - ಈಟಿವಿ ಭಾರತ ಕನ್ನಡ
🎬 Watch Now: Feature Video
ರಾಮನಗರ: 20 ವರ್ಷ ಶಾಸಕರಾಗಿದ್ದವರು ಸೀರೆ ಹಂಚಿಕೊಂಡು ರಾಜಕೀಯ ಮಾಡಬೇಕಾ ಎಂದು ಸಿ.ಪಿ.ಯೋಗೇಶ್ವರ್ ವಿರುದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಯೋಗೇಶ್ವರ್ ಸತತ 2 ತಿಂಗಳಿಂದ ಚನ್ನಪಟ್ಟಣದಲ್ಲಿ ಸ್ವಾಭಿಮಾನಿ ನಡಿಗೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಚಿವರು 4 ಬಾರಿ ಶಾಸಕರಾಗಿದ್ದವರು. ಇನ್ನೂ ಸೀರೆ ಹಂಚಿಕೊಂಡು ರಾಜಕೀಯ ಮಾಡೋಕೆ ಹೊರಟಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿದ್ದರೆ ಸೀರೆ ಯಾಕೆ ಹಂಚಬೇಕಿತ್ತು ಎಂದರು.
ನಂತರ ಚನ್ನಪಟ್ಟಣದಿಂದ ನಟಿ ರಮ್ಯಾ ಸ್ಪರ್ಧೆ ವಿಚಾರವಾಗಿ ಮಾತನಾಡಿ, ರಮ್ಯಾ ಕೂಡ ನನ್ನ ಸಹೋದರಿ ಇದ್ದ ಹಾಗೆ. ನನ್ನ ವಿರುದ್ಧ ಯಾರು ಬೇಕಾದರೂ ಸ್ಪರ್ಧಿಸಬಹುದು. ಯಾರೇ ಸ್ಪರ್ಧಿಸಿದರೂ ನಾನು ಸ್ವಾಗತ ಕೋರುತ್ತೇನೆ. ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಇಬ್ಬರೂ ಕೂಡ ಮಾತನಾಡಿ ರಮ್ಯಾರನ್ನು ಸ್ಪರ್ಧೆ ಮಾಡಿಸಲಿ. ಇದು ಪ್ರಜಾಪ್ರಭುತ್ವ. ಚುನಾವಣೆ ಯಾರಿಗೂ ಶಾಶ್ವತ ಅಲ್ಲ. ಸೋಲು- ಗೆಲುವು ಎರಡನ್ನೂ ನಾನು ಸಮಚಿತ್ತವಾಗಿ ನೋಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಈ ಬಜೆಟ್ಗೆ ಮಹತ್ವ ಇಲ್ಲ, ಮುಂದಿನ ಸರ್ಕಾರ ನೀಡುವ ಬಜೆಟ್ ಕಾರ್ಯರೂಪಕ್ಕೆ: ಹೆಚ್ಡಿಕೆ