ವಿಜಯಪುರ: ಜಿಲ್ಲೆಯಾದ್ಯಂತ ಸಂಭ್ರಮದ ಹನುಮ ಜಯಂತಿ
🎬 Watch Now: Feature Video
ವಿಜಯಪುರ: ನಗರದ ಹನುಮ ದೇಗುಲಗಳಲ್ಲಿ ಇಂದು ಭಕ್ತರು ಸಂಭ್ರಮದಿಂದ ಹನುಮ ಜಯಂತಿ ಆಚರಿಸಿದರು. ಕೋಸುಂಬರಿ, ಶರಬತ್ತು ಹಾಗೂ ಪ್ರಸಾದ ವಿತರಣೆ ನಡೆಯಿತು. ನಗರದ ಮದಲಾ ಮಾರುತಿ ದೇವಸ್ಥಾನ, ವಜ್ರ ಹನುಮಾನ, ವೀರಾಂಜನೇಯ, ಪೋಸ್ಟ್ ಹನುಮಪ್ಪ, ಲದ್ದಿಕಟ್ಟಿ ಹನುಮಂತ, ತೆಗ್ಗಿನ ಹನುಮಂತ ಸೇರಿದಂತೆ ಜಿಲ್ಲೆಯಾದ್ಯಂತ ಇತರೆ ದೇವಸ್ಥಾನಗಳಲ್ಲಿಯೂ ಹನುಮಂತನಿಗೆ ಭಕ್ತಿ, ಶ್ರದ್ಧೆಯಿಂದ ಪೂಜೆ ನೆರವೇರಿತು.
ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಈ ಬಾರಿ ದೇವಸ್ಥಾನದಲ್ಲಿ ಅನ್ನ ಪ್ರಸಾದ ವಿತರಣೆ ಇರಲಿಲ್ಲ. ಪ್ರತಿ ವರ್ಷ ಹನುಮ ಹಾಗೂ ರಾಮ ಜಯಂತಿಯ ದಿನ ದೇವಸ್ಥಾನದಲ್ಲಿ ಭಕ್ತರಿಗೆ ಅನ್ನ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣಾ ಮಾದರಿ ನೀತಿ ಸಂಹಿತೆ ಅಡ್ಡಿಯಾಗಿದೆ.
ಇತ್ತೀಚಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆಗ ನೆರವೇರಿಸಲು ಜಿಲ್ಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸಿಎಂಗೆ ಬೆಳ್ಳಿ ಗದೆ ನೀಡಿದ್ದರು. ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಈ ಗದೆಯನ್ನು ಹನುಮಂತನ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ: ಅಂಜನಾದ್ರಿಯಲ್ಲಿ ಹನುಮ ಜಯಂತಿ ಮಾಲವಿರಮಣ: ಒಂದು ಲಕ್ಷ ಭಕ್ತರ ಆಗಮನ