ಮನೆ ಮನೆಗೂ ಗೃಹಲಕ್ಷ್ಮಿ; ಆಗಸ್ಟ್ 15 ರಿಂದ 2000 ರೂ. ಹಣ ಜಾರಿ : ಸಿಎಂ ಸಿದ್ದರಾಮಯ್ಯ - ಮುಖ್ಯಮಂತ್ರಿ ಸಿದ್ದರಾಮಯ್ಯ
🎬 Watch Now: Feature Video
ಗೃಹ ಲಕ್ಷ್ಮಿ ಯೋಜನೆ : ಇಂದು ಕಾಂಗ್ರೆಸ್ ಪಕ್ಷದ ಎರಡನೇ ಗ್ಯಾರಂಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಗಳಿಂದಾಗಿ ಈಗಾಲೇ ಗೃಹ ಲಕ್ಷ್ಮಿ ಯೋಜನೆ 2000 ರೂ. ಗಳನ್ನು ಮನೆ ಯಜಮಾನಿಯ ಅಕೌಂಟ್ ಗೆ ಜಮೆ ಮಾಡಲು ಸಾಧ್ಯವಿಲ್ಲ. ಆದರಿಂದ ಮನೆ ಯಜಮಾನಿಯ ಅಕೌಂಟ್ ಗೆ 2 ಸಾವಿರ ಜಮೆ ಮಾಡಲು ಆಧಾರ್ ಕಾರ್ಡ್, ಅಕೌಂಟ್ ನಂಬರ್ ಮೊದಲು ಕೊಡಬೇಕು. ಹಾಗೂ ಜೂನ್ 15 ರಿಂದ ಈ ಯೋಜನೆಯ ಫಲಾನುಭವಿಗಳು ಆಗಬೇಕಾದರೆ ಅನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
ಈ ಯೋಜನೆ ಪ್ರೋಸಸ್ ಜುಲೈ 15 ರಿಂದ ಶುರುವಾಗಲಿದ್ದು, ಆಗಸ್ಟ್ 15 ರಿಂದ ಕುಟುಂಬದ ಯಜಮಾನಿ ಅಕೌಂಟ್ಗೆ ಹಣ ಹಾಕಲಾಗುವುದು. ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವವರು ಎಲ್ಲರೂ ಈ ಯೋಜನೆಯಲ್ಲಿ ಫಲಾನುಭವಿಗಳು ಮತ್ತು ಯಾವುದೇ ಷರತ್ತುಗಳು ಅನ್ವಯಿಸುವುದಿಲ್ಲ ಎಂದು ಸಿಎಂ ಅವರು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : 'ಷರತ್ತು'ಗಳು ಗ್ಯಾರಂಟಿ- ಸರ್ಕಾರದ ಯೋಜನೆಗಳು ನಿಯಮ, ನಿಬಂಧನೆಗಳಿಗೆ ಒಳಪಟ್ಟಿರುತ್ತವೆ: ಪ್ರಿಯಾಂಕ್ ಖರ್ಗೆ