Watch... ಚಲಿಸುವ ರೈಲಿನ ಕೆಳಗೆ ಸಿಲುಕಿದ ಮಹಿಳೆ ಪ್ರಾಣಾಪಾಯದಿಂದ ಪಾರು! - ಈಟಿವಿ ಭಾರತ ಕನ್ನಡ
🎬 Watch Now: Feature Video
ಗಯಾ (ಬಿಹಾರ್): ಶಿಕ್ಷಕಿಯೊಬ್ಬರು ಹಳಿ ದಾಟುವ ವೇಳೆ ನಿಂತಿದ್ದ ರೈಲು ಏಕಾಏಕಿ ಚಲಿಸಲು ಪ್ರಾರಂಭಿಸಿದ ಹಿನ್ನೆಲೆ ಹಳಿಗಳ ನಡುವೆ ಸಿಲುಕಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಇಲ್ಲಿಯ ನಬಾದ್ ವಿಭಾಗದ ಟಂಕುಪ್ಪಾ ರೈಲು ನಿಲ್ದಾಣದಲ್ಲಿ ನಡೆದಿದೆ. ಮತ್ತೊಂದು ಬದಿಯ ಪ್ಲಾಟ್ಫಾರ್ಮ್ಗೆ ಹೋಗಲೆಂದು ಅಲ್ಲೇ ನಿಂತಿದ್ದ ಗೂಡ್ಸ್ ರೈಲಿನಡಿಯಿಂದ ಹಳಿ ದಾಟಲು ಶಿಕ್ಷಕಿ ಮುಂದಾಗಿದ್ದಾರೆ. ಹಳಿಗಳ ಮಧ್ಯೆ ಹೋಗುತ್ತಿದ್ದಂತೆ ಏಕಾಏಕಿ ರೈಲು ಅಲ್ಲಿಂದ ಚಲಿಸಲು ಪ್ರಾರಂಭಿಸಿದೆ. ಇದರಿಂದ ಶಿಕ್ಷಕಿಗೆ ದಾಟಲಾಗದೇ ಮಧ್ಯದಲ್ಲಿ ಸಿಲುಕಿ ಹಳಿಗಳ ನಡುವೆ ಮಲುಗಿದ್ದಾರೆ.
ಇನ್ನು ಕಲ್ಲಿದ್ದಲು ತುಂಬಿದ್ದ ಗೂಡ್ಸ್ ರೈಲು ಅವರ ಮೇಲಿಂದ ಹಾದು ಹೋಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಸ್ಥಳೀಯರೊಬ್ಬರು ವಿಡಿಯೋವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಅಲ್ಲದೇ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿದೆ.
ಇದನ್ನೂ ಓದಿ: ಕಳಚಿಕೊಂಡ ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲು ಬೋಗಿಗಳು; ಪ್ರಾಣ ಭಯ ಎದುರಿಸಿದ ಪ್ರಯಾಣಿಕರು!