ಮಾಲ್ಡೀವ್ಸ್ಗೆ 'ಮೇಕ್ ಇನ್ ಇಂಡಿಯಾ' ಗೂಡ್ಸ್ ನೌಕೆ ಹಸ್ತಾಂತರಿಸಿದ ಗೋವಾ - Etv Bharat Kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18571400-thumbnail-16x9-vny.jpg)
ಪಣಜಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಗೋವಾದಲ್ಲಿ ನಿರ್ಮಿಸಲಾದ ಸರಕು ಸಾಗಣೆ ನೌಕೆಯನ್ನು ಸೋಮವಾರ ಮಾಲ್ಡೀವ್ಸ್ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು. ಮಾಲ್ಡೀವ್ಸ್ ಪರಿಸರ ಸಚಿವಾಲಯಕ್ಕಾಗಿ ವಿಜಯ್ ಮೆರೈನ್ ಶಿಪ್ಯಾರ್ಡ್ನಲ್ಲಿ ನಿರ್ಮಿಸಿದ ಮೇಡ್ ಇನ್ ಗೋವಾದ ಸರಕು ಸಾಗಣೆ ನೌಕೆ 'ತಿಮವೇಶಿ'ಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹಸಿರು ನಿಶಾನೆ ತೋರಿಸಿದರು. ಈ ಮೂಲಕ ಮಾಲ್ಡೀವ್ಸ್ ಸರ್ಕಾರಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಲಾಯಿತು.
ವಿಜಯ್ ಮೆರೈನ್ ಶಿಪ್‌ಯಾರ್ಡ್ ನಿರ್ಮಿಸಿದ 30 ಮೀಟರ್ ಕ್ಯಾಟಮರ್ನಿಂದ ಸಮುದ್ರ ಸಂಶೋಧನೆ ಕೈಗೊಳ್ಳಲು ಮಾಲ್ಡೀವ್ಸ್ ಸರ್ಕಾರ ಮುಂದಾಗಿದೆ. ಈ ಹಡಗು ಹವಾಮಾನ ಬದಲಾವಣೆ, ಹವಳದ ಬಂಡೆಗಳು ಮತ್ತು ಮೀನುಗಾರಿಕೆಯ ಕುರಿತಂತೆ ಅನೇಕ ಮಾಹಿತಿ ಒದಗಿಸಲಿದ್ದು ತಂತ್ರಜ್ಞಾನ ಸಚಿವಾಲಯಕ್ಕೆ ಸಹಾಯಕವಾಗಲಿದೆ. ಹಡಗು ನಿರ್ಮಾಣ ಮತ್ತು ವಿನ್ಯಾಸಕ್ಕೆ ಐಐಟಿ ಖರಗ್‌ಪುರ ಜೊತೆಯಾಗಿತ್ತು.
ಈ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ನೌಕೆ ನಿರ್ಮಾಣ ವಲಯದಲ್ಲಿ ಗೋವಾಕ್ಕೆ ಇದು ಹೆಮ್ಮೆಯ ಕ್ಷಣ. ನಾನು ವಿಜಯ್ ಮರೀನ್ ಮತ್ತು ಈ ಯೋಜನೆಗಾಗಿ ಮಾಲ್ಡೀವ್ಸ್ ಸರ್ಕಾರವನ್ನು ಅಭಿನಂದಿಸುತ್ತೇನೆ. ಹಡಗು ನಿರ್ಮಾಣ ವಲಯದಲ್ಲಿ 'ಮೇಕ್ ಇನ್ ಗೋವಾ', ಮೇಕ್ ಇನ್ ಇಂಡಿಯಾವನ್ನು ಇನ್ನಷ್ಟು ಬಲಿಷ್ಟಗೊಳಿಸಲಿದೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಶ್ರೀನಗರದಲ್ಲಿ ಜಿ20 ಸಭೆ: ಸಿರಿಧಾನ್ಯಗಳ ಖಾದ್ಯಗಳನ್ನು ಸವಿಯಲಿರುವ ಪ್ರತಿನಿಧಿಗಳು