ಹಾಸನ : ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇಗುಲಕ್ಕೆ ದೇವಿಯ ಒಡವೆ ರವಾನೆ - ಹಾಸನಾಂಬೆ ದೇಗುಲ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/30-10-2023/640-480-19896928-thumbnail-16x9-sanjuu.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Oct 30, 2023, 7:09 PM IST
ಹಾಸನ : ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸಲಿರುವ ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವ ನವೆಂಬರ್ 2 ರಿಂದ 14ರ ತನಕ ನಡೆಯಲಿದೆ. ಹೀಗಾಗಿ ಇಂದು ದೇವಿಯ ಒಡವೆಗಳನ್ನು ದೇವಾಲಯಕ್ಕೆ ಕೊಂಡೊಯ್ಯಲಾಯಿತು.
ಒಡವೆ ಕೊಂಡೊಯ್ಯುವ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ಬಾರಿ 14 ದಿನಗಳ ಕಾಲ ದೇವಾಲಯ ಬಾಗಿಲು ತೆರೆಯಲಿದೆ. ಮೊದಲ ದಿನ ಹಾಗೂ ಕೊನೆಯ ದಿನ ಭಕ್ತರಿಗೆ ಅವಕಾಶವಿರುವುದಿಲ್ಲ. ಬದಲಿಗೆ ಬದಲಾಗಿ ಗರ್ಭಗುಡಿಯ ಬಾಗಿಲು ತೆರಯಲಿದೆ.
ಇದನ್ನೂ ಓದಿ: ಬೆಂಗಳೂರಿನ ಬಿಜೆಪಿ ಕಚೇರಿಗೆ ನಾಗಸಾಧುಗಳ ಭೇಟಿ: ವಿಡಿಯೋ
ಹಾಸನ ತಹಶೀಲ್ದಾರ್ ಶ್ವೇತ ಸಮ್ಮುಖದಲ್ಲಿ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಒಡವೆಗಳನ್ನು ಹೊರತಂದು ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿಯಲ್ಲಿ ಇರಿಸಲಾಯಿತು. ಸಂಪ್ರದಾಯದಂತೆ ಮಡಿವಾಳರು ಪಂಜು ಹಿಡಿದು ಮತ್ತು ಮುತ್ತೈದೆಯರು ಆರತಿ ಬೆಳಗಿದರು. ಈ ವೇಳೆ ಭಕ್ತರು ಹಾಸನಾಂಬೆ ದೇವಿಗೆ ಜೈಕಾರ ಕೂಗಿದರು. ಬೆಳ್ಳಿ ರಥದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಹಾಸನಾಂಬೆ ದೇಗುಲಕ್ಕೆ ತರಲಾಯಿತು.
ಇದನ್ನೂ ಓದಿ: ನ. 2ರಿಂದ ಹಾಸನಾಂಬೆ ಜಾತ್ರಾ ಮಹೋತ್ಸವ: 24ಗಂಟೆಯೂ ದರ್ಶನ ಭಾಗ್ಯ