ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನದಲ್ಲಿ ಸಸಿ ನೆಟ್ಟ ಜಿ7 ನಾಯಕರು- ವಿಡಿಯೋ
🎬 Watch Now: Feature Video
ಹಿರೋಷಿಮಾ (ಜಪಾನ್): ಅಮೆರಿಕದ ಮೊದಲ ಅಣುಬಾಂಬ್ ದಾಳಿಗೆ ತತ್ತರಿಸಿದ್ದ ಜಪಾನ್‌ನ ನಗರ ಹಿರೋಶಿಮಾದಲ್ಲಿ ಜಿ7 ರಾಷ್ಟ್ರಗಳ ಶೃಂಗಸಭೆಯು ಇಂದಿನಿಂದ (ಮೇ 19-21) ಮೂರು ದಿನ ನಡೆಯಲಿದೆ. ಇದಕ್ಕೂ ಮೊದಲು ಗುಂಪಿನ ನಾಯಕರು ಹಿರೋಷಿಮಾ ಶಾಂತಿ ಸ್ಮಾರಕ ಉದ್ಯಾನ (ಪೀಸ್ ಮೆಮೋರಿಯಲ್ ಪಾರ್ಕ್)ನಲ್ಲಿ ಸಸಿಗಳನ್ನು ನೆಟ್ಟರು. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್, ಯುಎಸ್ ಅಧ್ಯಕ್ಷ ಜೋ ಬೈಡನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಭಾಗಿಯಾಗಿದ್ದರು.
ಶಾಂತಿ ಸ್ಮಾರಕ ಉದ್ಯಾನವನಕ್ಕೆ ಜಿ7 ನಾಯಕರು ಒಬ್ಬೊಬ್ಬರಾಗಿ ಆಗಮಿಸುತ್ತಿದ್ದಂತೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸ್ವಾಗತಿಸಿದರು. ಹಿರೋಷಿಮಾ ಪೀಸ್ ಮೆಮೋರಿಯಲ್ ಪಾರ್ಕ್ ಈ ಪ್ರದೇಶದಲ್ಲಿ ಉಳಿದಿರುವ ಏಕೈಕ ರಚನೆ. ಆಗಸ್ಟ್ 6, 1945 ರಂದು ನಗರದ ಮೇಲೆ ವಿಶ್ವದ ಮೊದಲ ಪರಮಾಣು ಬಾಂಬ್ ದಾಳಿ ನಂತರದ ಪರಿಣಾಮಗಳನ್ನು ಇದು ಚಿತ್ರಿಸುತ್ತದೆ.
ಜಿ7 ರಾಷ್ಟ್ರಗಳ ಶೃಂಗಸಭೆಯ ಈ ವರ್ಷದ ಅಧ್ಯಕ್ಷತೆಯನ್ನು ಜಪಾನ್ ವಹಿಸಿಕೊಂಡಿದೆ. ರಷ್ಯಾ ದೇಶವು ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧವೇ ಈ ಸಭೆಯ ಪ್ರಮುಖ ಚರ್ಚಾ ವಿಷಯವಾಗಿರಲಿದೆ. ಜಿ7 ಗುಂಪು ಜಪಾನ್, ಇಟಲಿ, ಕೆನಡಾ, ಫ್ರಾನ್ಸ್ , ಯುಸ್, ಯುಕೆ ಮತ್ತು ಜರ್ಮನಿಯನ್ನು ಒಳಗೊಂಡಿದೆ.
ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ: ರಷ್ಯಾ ಮೇಲೆ ಅಮೆರಿಕದಿಂದ ಮತ್ತಷ್ಟು ಹೊಸ ನಿರ್ಬಂಧ