ಬಿಹಾರ: ಮರಳಿನಲ್ಲಿ ಸಿಲುಕಿದ್ದ ರಿಕ್ಷಾ ಮೇಲಕ್ಕೆತ್ತಿದ ಗಜರಾಜ - ವೈರಲ್ ವಿಡಿಯೋ - viral videos
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18528200-thumbnail-16x9-sa.jpg)
ವೈಶಾಲಿ (ಬಿಹಾರ): ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಆನೆಯೊಂದು ಮರಳಿನಲ್ಲಿ ಸಿಲುಕಿದ್ದ ಇ - ರಿಕ್ಷಾವನ್ನು ಮೇಲಕ್ಕೆತ್ತಲು ಸಹಾಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಿಕ್ಷಾವನ್ನು ಮೇಲೆಕ್ಕೆ ಎತ್ತಲು ಸಹಾಯ ಮಾಡಿದ ಗಜರಾಜನ ಮಾನವೀಯ ಗುಣಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈಶಾಲಿ ಜಿಲ್ಲೆಯ ಬಿದುಪುರ ಮತ್ತು ರಾಘೋಪುರ ನಡುವೆ ಸಂಚಾರಕ್ಕೆ ಇರುವ ರಸ್ತೆಯು ಸಂಪೂರ್ಣವಾಗಿ ಮರಳಿನಿಂದ ಆವೃತ್ತವಾಗಿದ್ದು, ರಾಘೋಪುರ ಕಡೆಯಿಂದ ಬರುತ್ತಿದ್ದ ಇ - ರಿಕ್ಷಾದ ಚಕ್ರ ಮರಳಿನಲ್ಲಿ ಸಿಲುಕಿಕೊಂಡಿದೆ. ರಿಕ್ಷಾ ಚಾಲಕ ಎಷ್ಟೇ ಪ್ರಯತ್ನಿಸಿದರೂ ಹೊರ ತೆಗೆಯಲು ಸಾಧ್ಯವಾಗದೇ ಇದ್ದಾಗ ಹಿಂದೆ ಬರುತ್ತಿದ್ದ ಆನೆಗೆ ಸಹಾಯ ಮಾಡಲು ಕೇಳಿದ್ದಾನೆ. ಆನೆಯ ಮೇಲೆ ಕುಳಿತ್ತಿದ್ದ ಮಾವುತನ ಆಜ್ಞೆಯ ಮೇರೆಗೆ ಆನೆಯು ತನ್ನ ಸೊಂಡಿಲಿನಿಂದ ಮರಳಿನಲ್ಲಿ ಸಿಲುಕಿದ್ದ ರಿಕ್ಷಾವನ್ನು ಮೇಲಕ್ಕೆತ್ತಿ ಮುಂದೆ ಹೋಗಲು ಸಹಾಯ ಮಾಡಿದೆ. ಈ ಘಟನೆಯು ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ : ಮುಂದಿನ 48 - 72 ಗಂಟೆಗಳಲ್ಲಿ ಸಚಿವ ಸಂಪುಟ ರಚನೆ: ಇನ್ನೂ ಯಾವುದೂ ಅಂತಿಮವಾಗಿಲ್ಲ... ಸುರ್ಜೇವಾಲಾ