ನರಳುತ್ತಿದ್ದ ಅಜ್ಜಿಯನ್ನು ಕೈಗಾಡಿಯಲ್ಲೇ ಆಸ್ಪತ್ರೆಗೆ ದಾಖಲಿಸಿದ ಬಾಲಕ: VIDEO - ಕೈಗಾಡಿ ಎಳೆಯುತ್ತಿರುವ 8ರ ಬಾಲಕ

🎬 Watch Now: Feature Video

thumbnail

By

Published : Dec 19, 2022, 10:31 AM IST

Updated : Feb 3, 2023, 8:36 PM IST

ಜಾರ್ಖಂಡ್: ಆಂಬ್ಯುಲೆನ್ಸ್ ಸೌಲಭ್ಯ ಲಭ್ಯವಾಗದ ಕಾರಣ ಎಂಟು ವರ್ಷದ ಬಾಲಕನೊಬ್ಬ ಕೈಗಾಡಿಯಲ್ಲೇ ತನ್ನ 75 ವರ್ಷದ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ ಚಂದಂಕಿಯಾರಿನ ಬಗನ್​ತೋಲ ನಿವಾಸಿಯಾದ ಮಾರೂರ ದೇವಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡಿದ್ದರು. ಅಜ್ಜಿಯ ಯಾತನೆ ನೋಡಲಾಗದೇ ಮೊಮ್ಮಗ ಸೂರಜ್, ಚಳಿಯಲ್ಲೇ ಅಜ್ಜಿಯನ್ನು ಕೈಗಾಡಿ ಮೇಲೆ ಮಲಗಿಸಿ ಎಳೆದುಕೊಂಡು ಹೋಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೊಕಾರೊದ ಮುಖ್ಯ ವೈದ್ಯಾಧಿಕಾರಿ ಡಾ.ಹೆಚ್.ಕೆ.ಮಿಶ್ರಾ ಪ್ರತಿಕ್ರಿಯೆ ನೀಡಿ, ಆ ಗ್ರಾಮ ಆಂಬ್ಯುಲೆನ್ಸ್‌ ಸೇವೆಯಿಂದ ಹೊರಗುಳಿದಿರುವುದರಿಂದ ಈ ಸ್ಥಿತಿ ಉಂಟಾಗಿದೆ. ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್‌ ಸೇವೆ ಸುಲಭವಾಗಿ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Last Updated : Feb 3, 2023, 8:36 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.