ರಾಯಚೂರು: ತಾಂತ್ರಿಕ ಸಮಸ್ಯೆಯಿಂದ ಆರ್‌ಟಿಪಿಎಸ್ ಕೇಂದ್ರದ 4 ವಿದ್ಯುತ್ ಉತ್ಪಾದನಾ​ ಘಟಕ ಸ್ಥಗಿತ - ರಾಯಚೂರು ವಿದ್ಯುತ್​ ಘಟಕ

🎬 Watch Now: Feature Video

thumbnail

By

Published : Jul 14, 2023, 2:39 PM IST

ರಾಯಚೂರು: ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಆರ್‌ಟಿಪಿಎಸ್ ಕೇಂದ್ರವಿದೆ. ಈ ಕೇಂದ್ರದಿಂದ ರಾಜ್ಯದ ವಿದ್ಯುತ್ ಬೇಡಿಕೆಯ ಬಹುಪಾಲು ವಿದ್ಯುತ್ ಉತ್ಪಾದಿಸುವ ಆರ್‌ಟಿಪಿಎಸ್ ಕೇಂದ್ರದ ನಾಲ್ಕು ವಿದ್ಯುತ್​ ಉತ್ಪಾದನಾ ಘಟಕಗಳು ತಾಂತ್ರಿಕ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ವಿದ್ಯುತ್ ಬೇಡಿಕೆ ಪೂರೈಕೆಯ ಸಮಸ್ಯೆ ತಲೆದೂರಿದೆ. ಕೇಂದ್ರದ ಒಟ್ಟು 8 ಘಟಕಗಳಲ್ಲಿ ಒಂದನೇ ಘಟಕ ಕಲ್ಲಿದ್ದಲು ಸಾಗಣೆ ಬಂಕರ್ ಕುಸಿದು ಸ್ಥಗಿತಗೊಂಡು ಒಂದು ವರ್ಷವಾಗಿದೆ. 3 ಮತ್ತು 6ನೇ ಘಟಕಗಳು ಬಾಯ್ಲರ್ ಟ್ಯೂಬ್‌ನಲ್ಲಿನ ಸೋರಿಕೆಯಿಂದ ಸ್ಥಗಿತಗೊಂಡಿವೆ. ಇನ್ನು 2ನೇ ಘಟಕ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿವೆ. ಇದರಿಂದ ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯವಿರುವ ಕೇಂದ್ರದಿಂದ ಪ್ರಸ್ತುತ ಕೇವಲ 447 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಬಳ್ಳಾರಿಯ ಬಿಟಿಪಿಎಸ್‌ನ ಮೂರು ಘಟಕಗಳಿಂದ 1,119 ಮೆಗಾವ್ಯಾಟ್, ವೈಟಿಪಿಎಸ್‌ನ ಎರಡು ಘಟಕಗಳಿಂದ 985 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ರಾಜ್ಯ ಜಾಲಕ್ಕೆ ರವಾನಿಸಲಾಗುತ್ತಿದೆ.

ಆರ್‌ಟಿಪಿಎಸ್​ಗೆ ನೀರಿನ ಕೊರತೆ : ರಾಯಚೂರಲ್ಲಿ ಮಳೆಯ ಕೊರತೆಯಿಂದ ಕೃಷ್ಣಾ ನದಿಯಿಂದ ನೀರಿನ ಹರಿವಿನ ಪ್ರಮಾಣ ಇಳಿಮುಖವಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್​ ಸ್ಥಾವರಕ್ಕೆ ನೀರಿನ ಕೊರತೆ ಎದುರಾಗಿದೆ.  

ಇದನ್ನೂ ಓದಿ: ನೀರು ಸರಬರಾಜು ಮಾಡದಿದ್ದಕ್ಕೆ ಆಕ್ರೋಶ: ರಾಯಚೂರು ನಗರಸಭೆಯ ವ್ಯಾಪ್ತಿಯ ಪಂಪ್‌ ಹೌಸ್​ಗೆ ಜನರ ಮುತ್ತಿಗೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.