ಮದ್ಯ ಸೇವಿಸಿ ರಸ್ತೆಗಿಳಿದು ಕುಡುಕನ ಅವಾಂತರ: ವಿಡಿಯೋ - ಮದ್ಯ ಸೇವಿಸಿ ಟ್ರಾಫಿಕ್ ಪೊಲೀಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17433490-thumbnail-3x2-tha.jpg)
ಮೈಸೂರು: ನಂಜನಗೂಡಿನ ಹೆದ್ದಾರಿಯ ಹುಲ್ಲಹಳ್ಳಿ ರಸ್ತೆಯ ಸಿಗ್ನಲ್ ಬಳಿ ಮದ್ಯವ್ಯಸನಿಯೊಬ್ಬ ಕುಡಿದ ಮತ್ತಿನಲ್ಲಿ ಟ್ರಾಫಿಕ್ ಪೊಲೀಸ್ನಂತೆ ವರ್ತಿಸಿದ್ದಾನೆ. ವೃತ್ತದ ಬಳಿ ಸಂಚಾರಿ ಪೊಲೀಸ್ ಇಲ್ಲದಿರುವುದನ್ನು ಗಮನಿಸಿ, ತಾನೇ ಟ್ರಾಫಿಕ್ ಪೊಲೀಸ್ ಎಂಬಂತೆ ನಡೆದುಕೊಂಡಿದ್ದಾನೆ. ಸಿಗ್ನಲ್ ಜಂಪ್ ಮಾಡಿದ ಬೈಕ್ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಗದರಿದ್ದಾನೆ. ರಸ್ತೆಗಿಳಿದು ಸಂಚಾರಿ ಪೊಲೀಸರಂತೆ ಕೈಬೀಸಿ ಕಾರ್ಯನಿರ್ವಹಿಸಿದ್ದು, ಕೆಎಸ್ಆರ್ಟಿಸಿ ಬಸ್ ಚಾಲಕನಿಗೂ ಟ್ರಾಫಿಕ್ ರೂಲ್ಸ್ ಫಾಲೋ ಮಾಡುವಂತೆ ಸೂಚಿಸುತ್ತಿದ್ದ. ಕುಡುಕನ ಕಿಕ್ಕೇಟಿನ ಅವಾಂತರ ಕಂಡ ವಾಹನ ಸವಾರರು ನಸು ನಕ್ಕು ಮುಂದೆ ಸಾಗುತ್ತಿದ್ದರು. ಸುಮಾರು ಒಂದು ಗಂಟೆಗಳ ಕಾಲ ಇದೇ ರೀತಿ ರೀತಿ ವರ್ತಿಸಿದ್ದಾನೆ.
Last Updated : Feb 3, 2023, 8:38 PM IST