ಜೆಎನ್ -1 ಹೊಸ ತಳಿಯ ವೈರಸ್ ದುರ್ಬಲ, ಸಂಕ್ರಾಂತಿ ಬಳಿಕ ತಾನಾಗಿಯೇ ಮಾಯವಾಗಲಿದೆ; ಡಾ.ಆಂಜಿನಪ್ಪ
🎬 Watch Now: Feature Video
Published : Dec 19, 2023, 5:56 PM IST
ದೊಡ್ಡಬಳ್ಳಾಪುರ: ಕೋವಿಡ್ ರೂಪಾಂತರಿ ಜೆಎನ್-1 ವೈರಸ್ ದುರ್ಬಲವಾದದ್ದು, ಸಂಕ್ರಾಂತಿ ಬಳಿಕ ತಾನಾಗಿಯೇ ಮಾಯವಾಗಲಿದೆ. ಹಾಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಾ. ಆಂಜಿನಪ್ಪ ಹೇಳಿದರು. ಕೊವೀಡ್ನಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ರೂಪಾಂತರಿ ವೈರಸ್ ಜೆಎನ್-1 ಎಂಬ ಹೊಸ ತಳಿ ರಾಜ್ಯಕ್ಕೆ ಕಾಲಿಟ್ಟಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರೂಪಾಂತರಿ ವೈರಸ್ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ. ಆದರೆ, 60 ವರ್ಷ ಮೇಲ್ಪಟ್ಟವರು ಮತ್ತು 3 ರಿಂದ 13 ವರ್ಷದ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹಿಂದಿನ ಅನುಭವದ ಪ್ರಕಾರ ಜನರು ಗುಂಪು ಗುಂಪಾಗಿ ಸೇರಬಾರದು. ಸರ್ಕಾರದ ಗೈಡ್ಲೈನ್ ಪ್ರಕಾರ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು. ಜೆಎನ್-1 ವೈರಸ್ನಿಂದ ಸಾಮಾನ್ಯ ನೆಗಡಿ, ಕೆಮ್ಮು, ಜ್ವರ ಬರುತ್ತೆ. ಐಸಿಯುನಲ್ಲಿ ಆಡ್ಮಿಟ್ ಆಗುವಷ್ಟು ಆತಂಕಕಾರಿಯಲ್ಲ. ಸದ್ಯ ಕರ್ನಾಟಕದಲ್ಲಿ 53 ಜನರಲ್ಲಿ 6 ಜನ ಐಸಿಯುನಲ್ಲಿದ್ದಾರೆ ಎಂಬ ಮಾಹಿತಿ ಇದೆ. 8 ಜನರು ವಾರ್ಡ್ನಲ್ಲಿದ್ದಾರೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸ್ಪೆಷಲ್ ಟಾಸ್ಕ್ಪೋರ್ಸ್ ಜೊತೆ ಚರ್ಚೆ ನಡೆಸಿದ್ದಾರೆ. ಚಳಿಯಂತಹ ವಾತಾವರಣದಲ್ಲಿ ವೈರಸ್ ಹರಡುವಿಕೆ ಹೆಚ್ಚಾಗಿರುತ್ತದೆ. ಆದರೆ, ಸಂಕ್ರಾಂತಿಯ ನಂತರ ವೈರಸ್ ತಾನಾಗಿಯೇ ಮಾಯವಾಗುತ್ತದೆ ಎಂದರು.
ಇದನ್ನೂ ಓದಿ: ಕೊರೊನಾ ಹೆಚ್ಚಳ: 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್, ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ