ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಡಿಜಿಟಲ್ ಲೈಬ್ರರಿ ಆಕರ್ಷಣೆ: ವಿಡಿಯೋ - ETV Bharat Karnataka
🎬 Watch Now: Feature Video
Published : Nov 30, 2023, 10:55 PM IST
ಬೆಂಗಳೂರು : ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಡಿಜಿಟಲ್ ಲೈಬ್ರರಿ ಎಲ್ಲರ ಗಮನ ಸೆಳೆಯಿತು. ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ನಲ್ಲಿ ಅಳವಡಿಸಿದ್ದ ಡಿಜಿಟಲ್ ಲೈಬ್ರರಿಯನ್ನು ವಿದ್ಯಾರ್ಥಿಗಳು ಸೇರಿ ನೂರಾರು ಮಂದಿ ವೀಕ್ಷಿಸಿದರು. ಕೆಲವರು ಅದರ ಬಗ್ಗೆ ಮಾಹಿತಿ ಪಡೆದುಕೊಂಡರೆ, ಇನ್ನೂ ಕೆಲವರಂತೂ ಅದರ ಮುಂದೆ ನಿಂತು ಸೆಲ್ಫೀ ತೆಗೆಸಿಕೊಳ್ಳುತ್ತಿರುವ ದೃಶ್ಯ ಕಂಡುಬಂತು.
ಡೇಟಾ ಅನಾಲೆಟಿಕ್ಸ್, ಡಿಜಿಟಲ್ ಲಿಟ್ರಸಿ, ಎಐ, ಸೈಬರ್ ಸೆಕ್ಯೂರಿಟಿ, ಮಷಿನ್ ಲರ್ನಿಂಗ್ ಮತ್ತಿತರ ಮಾಹಿತಿಗಳನ್ನು ಈ ಲೈಬ್ರರಿಯಲ್ಲಿ ಅಳವಡಿಸಲಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಗೆ ತೆರಳಿ ಈ ಲೈಬ್ರರಿ ಮಕ್ಕಳಿಗೆ ಮಾಹಿತಿ ನೀಡಲಿದೆ. ಎಲೆಕ್ಟ್ರಾನಿಕ್‌ಗೆ ಸಂಬಂಧಿಸಿದ ಮಾಹಿತಿಗಳೂ ಅಲ್ಲಿ ಸಿಗುತಿತ್ತು. ಈ ಲೈಬ್ರರಿ ರಾಜ್ಯಾದ್ಯಂತ ಸಂಚರಿಸಲಿದೆ. ಈಗಾಗಲೇ ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಆರಂಭಗೊಂಡಿದ್ದು, ಐದಾರು ಶಾಲೆಗಳನ್ನು ತಲುಪಿ ಮಕ್ಕಳಿಗೆ ಮಾಹಿತಿ ನೀಡಿದೆ. ಸಮಿಟ್ ಬಳಿಕ ಈ ವಾಹನ ರಾಜ್ಯಾದ್ಯಂತ ಪ್ರಯಾಣ ಬೆಳೆಸಿ ಸರ್ಕಾರಿ, ಖಾಸಗಿ ಶಾಲೆಗಳ ಮಕ್ಕಳಿಗೆ ಐಟಿ ಕುರಿತು ಪ್ರಾಥಮಿಕ ಮಾಹಿತಿ ಒದಗಿಸಲಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.
ಇದನ್ನೂ ಓದಿ : ಬೆಂಗಳೂರು ಟೆಕ್ ಸಮ್ಮಿಟ್: ಸೇನೆ, ಪೊಲೀಸರ ನೆರವಿಗಾಗಿ 180 ಗ್ರಾಂ ತೂಕದ ಡ್ರೋನ್