ಕನ್ನಡ ಧ್ವಜಸ್ಥಂಭ ಧ್ವಂಸ: ಅಧಿಕಾರಿಗಳ ವಿರುದ್ಧ ಕನ್ನಡ ಪರ ಹೋರಾಟಗಾರರ ಪ್ರತಿಭಟನೆ - ಕನ್ನಡಪರ ಹೋರಾಟಗಾರ ಕಿರಣ್
🎬 Watch Now: Feature Video
ಶಿವಮೊಗ್ಗ: ನಗರದಲ್ಲಿ ಸ್ಮಾರ್ಟ್ ಸಿಟಿಯ ಅವಾಂತರಗಳು ಒಂದಲ್ಲಾ ಎರಡಲ್ಲಾ. ನಿತ್ಯ ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ಶಿವಮೊಗ್ಗ ನಗರದ ಜನ ರೋಸಿ ಹೋಗಿದ್ದಾರೆ. ಇದರ ನಡುವೆ ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ಕನ್ನಡ ಧ್ವಜಸ್ತಂಭ ವನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಜೆಸಿಬಿಯಿಂದ ಧ್ವಂಸಗೊಳಿಸಿದ್ದಾರೆ. ಇದರಿಂದಾಗಿ ರೊಚ್ಚಿಗೆದ್ದ ಕನ್ನಡ ಪರ ಹೋರಾಟಗಾರರು ಸ್ಥಳಕ್ಕೆ ದೌಡಾಯಿಸಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಕನ್ನಡದ ಅಸ್ಮಿತೆಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಧಕ್ಕೆ ಉಂಟು ಮಾಡಿದ್ದಾರೆ. 35 ವರ್ಷಗಳ ಇತಿಹಾಸ ಇರುವ ಕನ್ನಡ ಧ್ವಜ ಸ್ತಂಭ ಧ್ವಂಸಗೊಳಿಸಿದ್ದಾರೆ. ಹಾಗಾಗಿ, ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಧ್ವಜಸ್ತಂಭವನ್ನು ಮತ್ತೆ ಅದೇ ಸ್ಥಳದಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.
12-12-1988 ರಲ್ಲಿ ಡಾ ರಾಜ್ಕುಮಾರ್ ಸಂಘದ ರಾಜ್ಯಾಧ್ಯಕ್ಷ ಸಾ ರಾ ಗೋವಿಂದ್ ಅವರು ಧ್ವಜ ಕಟ್ಟೆಯನ್ನು ಉದ್ಘಾಟಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ಈ ಸ್ಥಳದಲ್ಲೇ ಕನ್ನಡ ರಾಜೋತ್ಸ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ, ಇಂದು ಯಾರಿಗೂ ಹೇಳದೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಧ್ವಜ ಕಟ್ಟೆಯನ್ನು ಧ್ವಂಸ ಗೊಳಿಸಿರುವುದು ಅಪರಾಧ ಹಾಗೂ ಕನ್ನಡಕ್ಕೆ ಮಾಡಿದ ಅಪಮಾನ.
ಹಾಗಾಗಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ ಹಾಗೂ ಕನ್ನಡಪರ ಹೋರಾಟಗಾರ ಕಿರಣ್ ಒತ್ತಾಯಿಸಿದರು.
ಇದನ್ನೂ ಓದಿ: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕ್ಗಳಿಗೆ ಗುದ್ದಿ ದುಷ್ಕರ್ಮಿಗಳು ಪರಾರಿ-ವಿಡಿಯೋ