Watch... ನಿರಂತರ ಸುರಿದ ಮಳೆಗೆ ಪೊಲೀಸ್​ ಠಾಣೆಯೇ ಜಲಾವೃತ

🎬 Watch Now: Feature Video

thumbnail

ದರ್ಭಾಂಗ​ (ಬಿಹಾರ): ಬಿಹಾರದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ವಿವಿಧ ಜಿಲ್ಲೆಗಳಲ್ಲಿ ಭಾರಿ ಮೇಳೆಯಾಗುತ್ತಿದೆ. ಅದರಲ್ಲಿ ದರ್ಭಾಂಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹೃದಯ ಭಾಗದಲ್ಲಿರುವ ಮುಖ್ಯರಸ್ತೆ ಸೇರಿದಂತೆ ಪುರಸಭೆಯ ಬಹುತೇಕ ವಾರ್ಡ್‌ಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಜಲಾವೃತವಾಗಿವೆ. ಅಲ್ಲದೇ ಪೊಲೀಸ್​ ಠಾಣೆಗೂ ನೀರು ನುಗ್ಗಿವೆ. ಅತೀಯಾದ ಮಳೆಯಿಂದ ಚರಂಡಿಗಳು ತುಂಬಿದ ಕಾರಣ ನಗರದ ಬೀಟಾ ಪೊಲೀಸ್​​ ಠಾಣೆಗೆ ನೀರು ನುಗ್ಗಿವೆ.

ಈ ಬಗ್ಗೆ ಪೊಲೀಸ್​ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್​ ಠಾಣೆ ಸೇರಿದಂತೆ ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದರಿಂದ ಸಮಸ್ಯೆ ಎದುರಾಗಿದೆ. ಚರಂಡಿ ನೀರಿನಲ್ಲಿನ ಕಸವೆಲ್ಲ ಠಾಣೆಗೆ ನುಗ್ಗುತ್ತಿವೆ. ಅಲ್ಲದೇ ಕೆಲವೆಡೆ ನೀರಿನಲ್ಲಿ ಹಾವು, ಕ್ರಿಮಿ ಕೀಟಗಳ ಹರಿದು ಬಂದಿದ್ದು, ಇಲ್ಲಿಗೂ ಬರುವ ಆತಂಕ ಎದುರಾಗಿದೆ. ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಆಹಾರ ತಯಾರಿಸಲು ತೊಂದರೆ ಉಂಟಾಗಿದ್ದು, ಕುಡಿಯುವ ನೀರಿನಲ್ಲಿ ಕಸ ಬರುತ್ತಿದೆ ಇದರಿಂದ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. 

ಹಗಲು ಸಮಯದಲ್ಲಿ ಬೇರೆಡೆ ತೆರಳಿ ಅಡುಗೆ ಮಾಡಬಹುದು ಅಥವಾ ಹೊರಗಡೆ ಹೋಟೆಲ್​ಗಳಲ್ಲಿ ಊಟ ಮಾಡಿಬರಬಹುದು. ಆದರೇ ರಾತ್ರಿ ಸಮಯದಲ್ಲಿ ಹೊರ ಹೋಗಲು ಕಷ್ಟವಾಗಿದೆ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಚರಂಡಿಗಳು ಕಾಣದಂತಾಗಿದೆ. ಹಾಗಾಗಿ ಜನರು ಅಡುಗೆ ಮಾಡಲು ಪರದಾಡುವಂತಾಗಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ:  ಕೇರಳದಲ್ಲಿ ಮಳೆ ಆರ್ಭಟ: ಒಬ್ಬ ಸಾವು, ಉಕ್ಕಿಹರಿದ ನದಿಗಳು:ಇಡುಕ್ಕಿ ಜಿಲ್ಲೆಯಲ್ಲಿ ರೆಡ್ ಅಲರ್ಟ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.