ಮಳೆ ಇಲ್ಲದೇ ಕಂಗ್ಗೆಟ್ಟಿದ ರೈತರಿಗೆ ಹೊಡೆತ ಕೊಟ್ಟ ವರುಣ: ನೆಲಕಚ್ಚಿದ ಭತ್ತದ ಪೈರು.. - etv bharat kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/07-11-2023/640-480-19967999-thumbnail-16x9-vny.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 7, 2023, 10:51 PM IST
ದಾವಣಗೆರೆ: ಬರದಿಂದ ಕಂಗೆಟ್ಟಿದ್ದ ರೈತರಿಗೆ ಇದ್ದಕ್ಕಿದ್ದಂತೆ ಮಳೆ ಹೊಡೆತ ಕೊಟ್ಟಿದೆ. ಕಳೆದ ರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಭತ್ತದ ಬೆಳೆ ನೆಲಸಮವಾಗಿದ್ದು, ಇದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಮಳೆ ಹೊಡೆತಕ್ಕೆ ಭತ್ತದ ಪೈರು ನೆಲಕಚ್ಚಿದೆ. ಮಳೆಯಿಂದಾಗಿ ಭತ್ತದ ಬೆಳೆ ಚಾಪೇ ರೀತಿಯಲ್ಲಿ ನೆಲಸಮವಾಗಿದೆ. ರಾಜನಹಳ್ಳಿ ಗ್ರಾಮದ ರೈತ ಮಂಜುನಾಥ್ ಅವರಿಗೆ ಸೇರಿದ ಈ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆಗೆ 30 ಸಾವಿರ ರೂಪಾಯಿಂತೆ ಎರಡು ಎಕರೆಗೆ ಒಟ್ಟು 60 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಮಳೆ ಇಲ್ಲ ಎಂದು ಪರಿತಪಿಸುತ್ತಿದ್ದ ರೈತ ಮಂಜುನಾಥ್ ಅವರಿಗೆ ಒಂದೇ ಮಳೆಗೆ ಪೈರು ನೆಲಕಚ್ಚಿದೆ.
ಮಳೆ ಇಲ್ಲದೆ ಪಂಪ್‌ಸೆಟ್ ಮೂಲಕ ಭದ್ರಾ ಕೆನಲ್ ಮೂಲಕ ನೀರು ಹಾಯಿಸಿ ಭತ್ತ ಬೆಳೆದಿದ್ದ ಮಂಜುನಾಥ್ ಇನ್ನೇನು ಒಂದೆರೆಡು ವಾರಗಳಲ್ಲಿ ಭತ್ತ ಕಟಾವಿಗೆ ಬಂದಿದ್ದು, ಈಗ ಮಳೆ ಸುರಿದು ಹಾಳಾಗಿದೆ.
ಇದನ್ನೂ ಓದಿ: ಮಂಡ್ಯ: ಧಾರಾಕಾರ ಮಳೆಗೆ ವಿಸಿ ನಾಲೆಯ ಸುರಂಗದ ಮೇಲ್ಭಾಗದ ಭೂಮಿ ಕುಸಿತ