ಮೊಸಳೆ ಬಂತು ಮೊಸಳೆ.. ಬರಿ ಗೈಯಲ್ಲೇ ಮಕರ ಹಿಡಿದ ಅರಣ್ಯ ಸಿಬ್ಬಂದಿ! - ಸೋಲಾನಿ ನದಿಯಲ್ಲಿ ಮೊಸಳೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16450214-thumbnail-3x2-sefdde.jpg)
ಉತ್ತರಾಖಂಡದ ಹರಿದ್ವಾರದ ಇಬ್ರಾಹಿಂಪುರದ ಜನವಸತಿ ಪ್ರದೇಶಕ್ಕೆ ಮೊಸಳೆಯೊಂದು ಎಂಟ್ರಿಕೊಟ್ಟಿತ್ತು. ಇದರಿಂದ ಗಾಬರಿಗೊಂಡ ಗ್ರಾಮಸ್ಥರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮೂರು ಗಂಟೆಗಳ ಕಾಲ ಶ್ರಮಿಸಿ ಮೊಸಳೆ ಹಿಡಿದರು. ಗ್ರಾಮದ ಸಮೀಪದ ಸೋಲಾನಿ ನದಿಯಲ್ಲಿ ಮೊಸಳೆಗಳಿವೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಸುರಿದ ಮಳೆಯಿಂದ ಗ್ರಾಮದ ಬಯಲಿನಲ್ಲಿ ನೀರು ಸಂಗ್ರಹವಾಗಿದ್ದು, ಇದರಲ್ಲಿ ಮೊಸಳೆ ನುಗ್ಗಿತ್ತು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ. ಬಳಿಕ ಮೊಸಳೆಯನ್ನು ರಕ್ಷಿಸಿದ ಅರಣ್ಯ ಇಲಾಖೆಯವರು ಕಡೆಗೆ ಅದನ್ನು ನದಿಗೆ ಬಿಟ್ಟಿದ್ದಾರೆ.
Last Updated : Feb 3, 2023, 8:28 PM IST