ಕೋಳಿ ಮರಿಗಳನ್ನು ನುಂಗಿದ್ದ ನಾಗರ ಹಾವು ಸೆರೆ: ಕಾಡಿಗೆ ಬಿಡುಗಡೆ - ETv Bharat Karnataka
🎬 Watch Now: Feature Video
ಶಿವಮೊಗ್ಗ ಹೊರ ವಲಯದ ಪಶು ವೈದ್ಯಕೀಯ ಮಹಾವಿದ್ಯಾಲಯದ ಜಾನುವಾರು ಸಾಕಣೆ ಸಂಕಿರ್ಣದ ಕೋಳಿ ಸಾಕಣೆ ಕೇಂದ್ರಕ್ಕೆ ಇಂದು ಬೆಳಗ್ಗೆ ನಾಗರ ಹಾವು ನುಗ್ಗಿದೆ. ಸುಮಾರು ಐದು ಅಡಿ ಉದ್ದದ ನಾಗರ ಹಾವು 10 ಕೋಳಿ ಮರಿಗಳನ್ನು ತಿಂದು ಹಾಕಿದೆ. 20 ಕ್ಕೂ ಹೆಚ್ಚು ಕೋಳಿ ಮರಿಗಳು ಸಾವನ್ನಪ್ಪಿವೆ. ಇದನ್ನು ನೋಡಿದ ಕಾಲೇಜಿನ ಸಿಬ್ಬಂದಿ ಸ್ನೇಕ್ ಕಿರಣ್ಗೆ ಪೋನ್ ಮಾಡಿ ತಿಳಿಸಿದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಹಾವು ರಕ್ಷಿಸಿದರು. ಬಳಿಕ ಹಾವು ನುಂಗಿದ್ದ 10 ಕೋಳಿ ಮರಿಗಳನ್ನು ಹೊರ ಚೆಲ್ಲಿದೆ. ನಂತರ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಯಿತು.
Last Updated : Feb 3, 2023, 8:33 PM IST