ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪತ್ನಿ, ಮಗನಿಂದ ಭರ್ಜರಿ ಮತಬೇಟೆ - ರಾಜ್ಯ ವಿಧಾನಸಭೆ ಚುನಾವಣೆ
🎬 Watch Now: Feature Video
ಹಾವೇರಿ: ರಾಜ್ಯದಲ್ಲಿ ಬಿಸಿಲ ಬೇಗೆಗಿಂತ ರಾಜ್ಯ ವಿಧಾನಸಭೆ ಚುನಾವಣೆ ಕಾವೇ ಹೆಚ್ಚಾಗಿದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸ್ತಿರೋದು ಒಂದೆಡೆಯಾದರೆ, ಇನ್ನೂ ಕೆಲವರು ತಮ್ಮ ಪತ್ನಿ, ಮಕ್ಕಳು, ಮೊಮ್ಮಕಳನ್ನು ಕಣಕ್ಕಿಳಿಸಿದ್ದಾರೆ. ರಾಜ್ಯಾದ್ಯಂತ ಪ್ರಚಾರ ನಡೆಸಬೇಕಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಕ್ಷೇತ್ರವಾದ ಶಿಗ್ಗಾಂವಿ ಸವಣೂರು ಮತದಾರರ ತಲುಪಲು ಸಾಧ್ಯವಾಗ್ತಿಲ್ಲ. ಹೀಗಾಗಿ ಸಿಎಂ ಸಹೋದರ, ಪತ್ನಿ ಚೆನ್ನಮ್ಮ, ಪುತ್ರ ಭರತ್ ಮತಬೇಟೆಗೆ ಇಳಿದಿದ್ದಾರೆ.
ಸಿಎಂ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ ತಮ್ಮದೇ ಆದ ಮಹಿಳಾ ತಂಡವನ್ನು ಕಟ್ಟಿಕೊಂಡು ಶಿಗ್ಗಾಂವಿ ಕ್ಷೇತ್ರವನ್ನು ಜಾಲಾಡ್ತಿದ್ದಾರೆ. ಹನುಮರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ ಮನೆಗೂ ಭೇಟಿ ನೀಡಿ ಪತಿಯ ಪರವಾಗಿ ಮತಯಾಚನೆ ಮಾಡ್ತಿದ್ದಾರೆ. ಹನುಮರಳ್ಳಿಯ ಬೀರಲಿಂಗೇಶ್ವರನಿಗೆ ಪುಷ್ಪಾರ್ಪಣೆ ಮಾಡಿ ಮತಯಾಚನೆ ಶುರುವಿಟ್ಟುಕೊಂಡಿದ್ದಾರೆ.
ಈ ಬಾರಿ ತಮ್ಮ ಪತಿ ಬೊಮ್ಮಾಯಿ ಅವರಿಗೆ ರಾಜ್ಯದ ಜವಾಬ್ದಾರಿ ಇದೆ. ನಿಮ್ಮನ್ನು ಭೇಟಿ ಆಗಲು ಉತ್ಸುಕರಾಗಿದ್ದಾರೆ. ಆದ್ರೆ, ಸಮಯದ ಅಭಾವದಿಂದ ಅದು ಸಾಧ್ಯವಾಗ್ತಿಲ್ಲ. ಅವರೇ ನಿಮ್ಮಿಂದ ಮತಯಾಚನೆ ಮಾಡಿದ್ದಾರೆ ಅಂದುಕೊಂಡು ಮತ ನೀಡಿ ಅಂತಾ ಮನವಿ ಮಾಡ್ತಿದಾರೆ.