ಚಾಮರಾಜನಗರ: 44 ಪ್ರಕರಣ ಭೇದಿಸಿ 1.34 ಕೋಟಿ ಚಿನ್ನಾಭರಣ ಹಿಂತಿರುಗಿಸಿದ ಗಡಿಜಿಲ್ಲೆ ಪೊಲೀಸರು

🎬 Watch Now: Feature Video

thumbnail

ಚಾಮರಾಜನಗರ : ಕಳೆದ 8 ತಿಂಗಳಿನಲ್ಲಿ ದಾಖಲಾಗಿದ್ದ 77 ವಿವಿಧ ಕಳವು ಪ್ರಕರಣಗಳಲ್ಲಿ 44 ಪ್ರಕರಣಗಳನ್ನು ಭೇದಿಸಿ 1.34 ಕೋಟಿ ಮೌಲ್ಯದ ಚಿನ್ನಾಭರಣ, ವಸ್ತುಗಳನ್ನು ಮಂಗಳವಾರ ವಾರಸುದಾರರಿಗೆ ಚಾಮರಾಜನಗರ ಜಿಲ್ಲೆ ಪೊಲೀಸರು ಒಪ್ಪಿಸಿದ್ದಾರೆ. 

20 ಪ್ರಕರಣಗಳಲ್ಲಿ 1.5 ಕೋಟಿ ರೂ. ಮೌಲ್ಯದ ಚಿನ್ನಾಭರಣ, 11 ಪ್ರಕರಣಗಳಲ್ಲಿ ವಾಹನಗಳು, 4 ಪ್ರಕರಣಗಳಲ್ಲಿ 10 ಲಕ್ಷ ನಗದು, 9 ಪ್ರಕರಣಗಳಲ್ಲಿ ತಾಮ್ರ-ಕಂಚಿನ ವಸ್ತುಗಳನ್ನು ಪತ್ತೆಹಚ್ಚುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಒಟ್ಟು 44 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ವಸ್ತುಗಳ ಒಟ್ಟು ಮೌಲ್ಯ 1,34,46,261 ಕೋಟಿ ರೂ. ಆಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದ್ದಾರೆ.   

1927 ಲೀಟರ್​​ ವಿವಿಧ ಕಂಪನಿಯ ಮದ್ಯದ ವಶ : ಸೆ. 2 ರಂದು ಬೆಳಗಾವಿಯ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಗೋವಾದಿಂದ ಲಾರಿಯಲ್ಲಿ ಪ್ಲೈವುಡ್ ಶೀಟುಗಳ ನಡುವೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಲಾರಿ ಚಾಲಕ ಉತ್ತರಪ್ರದೇಶ ವಾರಾಣಸಿಯ ವಿರೇಂದ್ರ ಕಲ್ಪನಾಥ ಮಿಶ್ರಾನನ್ನು ಅಧಿಕಾರಿಗಳು ಬಂಧಿಸಿದ್ದು, 28 ಲಕ್ಷ ರೂ. ಮೌಲ್ಯದ 1927 ಲೀಟರ್​​ ವಿವಿಧ ಕಂಪನಿಯ ಮದ್ಯದ ಬಾಟಲಿಗಳನ್ನು ಹಾಗೂ 25 ಲಕ್ಷ ಮೌಲ್ಯದ ಲಾರಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು.    

ಇದನ್ನೂ ಓದಿ : ವೈದ್ಯರ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.