ಬಳ್ಳಾರಿಯಲ್ಲಿ ಹೋರಿ ಸ್ಪರ್ಧೆ.. ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ದುರಂತ! - ಬಳ್ಳಾರಿ ಸುದ್ದಿ
🎬 Watch Now: Feature Video

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಹಿನ್ನೆಲೆ ನಿನ್ನೆ ಹೋರಿ ಹಿಡಿಯುವ ಸ್ಪರ್ಧೆ ಅದ್ಧೂರಿಯಾಗಿ ನಡೆಯಿತು. ಈ ಸ್ಪರ್ಧೆಯಲ್ಲಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಪರ್ಧೆಗೆ ಅಣಿಯಾಗುವ ವೇಳೆ ಹೋರಿಯೊಂದು ಜನರ ಗುಂಪಿನತ್ತ ನುಗ್ಗಿತು. ಈ ವೇಳೆ ಜನ ದಿಕ್ಕಾಪಾಲಾಗಿ ಓಡಿದರು. ಹೋರಿ ಹಿಡಿಯುವ ಸ್ಪರ್ಧೆ ವೀಕ್ಷಣೆ ಮಾಡುತ್ತಿದ್ದ ಮಹಿಳೆಯರು ಕೂಡ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
Last Updated : Feb 3, 2023, 8:23 PM IST