ರಸ್ತೆಯಲ್ಲೇ ಬಡಿದಾಡಿಕೊಂಡ ಬ್ರೋಕರ್-ಅಂಗಡಿ ಮಾಲೀಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬಡಿದಾಡಿಕೊಂಡ ಬ್ರೋಕರ್ ಅಂಗಡಿ ಮಾಲೀಕ
🎬 Watch Now: Feature Video
ಬೆಂಗಳೂರು: ಗ್ರಾಹಕರಿಗಾಗಿ ಮಧ್ಯವರ್ತಿ ಹಾಗೂ ಅಂಗಡಿ ಮಾಲೀಕ ರಸ್ತೆಯಲ್ಲೇ ಬಡಿದಾಡಿಕೊಂಡಿರುವ ಘಟನೆ ನಿನ್ನೆ ಮಧ್ಯಾಹ್ನ ನಗರದ ಎಸ್.ಪಿ.ರಸ್ತೆಯಲ್ಲಿ ನಡೆದಿದೆ. ಗಲಾಟೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಫೋನ್‌ಗಳಿಂದ ಹಿಡಿದು ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಅವುಗಳ ಬಿಡಿಭಾಗಗಳಿಗಾಗಿ ಅನೇಕ ಗ್ರಾಹಕರು ಎಸ್.ಪಿ ರಸ್ತೆಯ ಮಾರುಕಟ್ಟೆಗೆ ಬರುತ್ತಾರೆ. ಆದ್ದರಿಂದಲೇ ಬಹುತೇಕ ಅಂಗಡಿ ಮಾಲೀಕರು ಗ್ರಾಹಕರನ್ನ ಗಿಟ್ಟಿಸಲು ತಮ್ಮದೇ ಮಧ್ಯವರ್ತಿಗಳನ್ನ ನೇಮಿಸಿಕೊಂಡಿದ್ದಾರೆ. ಇದರಿಂದಾಗಿ ಕೆಲವೊಮ್ಮೆ ಖರೀದಿಗೆ ಬರುವ ಗ್ರಾಹಕರಿಗೆ ಕಿರಿಕಿರಿ ಅನಿಸುವಂತೆ ವರ್ತಿಸುವ ಮಧ್ಯವರ್ತಿಗಳು ವರ್ತಿಸುತ್ತಿದ್ದು, ಈ ಬಗ್ಗೆ ಹಲವು ಬಾರಿ ಪೊಲೀಸರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೆಲ ಗ್ರಾಹಕರು ಆರೋಪಿಸಿದ್ದಾರೆ.