ಧಾರವಾಡ: ಅಂಗರಕ್ಷಕನಿಂದ ಶೂ ತೊಡಿಸಿಕೊಂಡ ಸಚಿವ ಮಹದೇವಪ್ಪ - Minister Mahadevappa

🎬 Watch Now: Feature Video

thumbnail

By ETV Bharat Karnataka Team

Published : Nov 8, 2023, 1:54 PM IST

Updated : Nov 8, 2023, 4:59 PM IST

ಧಾರವಾಡ: ಇಲ್ಲಿನ ಸರ್ಕಾರಿ ಹಾಸ್ಟೆಲ್​​ಗೆ ಇಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲು ಆಲಿಸಿದರು. ಧಾರವಾಡ ನಗರದ ಸಪ್ತಾಪುರದಲ್ಲಿರುವ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಸಚಿವರ ಬಳಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಸಚಿವ ಮಹದೇವಪ್ಪ ಅವರು ಅಧಿಕಾರಿಗಳಿಂದ ವಿವಿಧ ಮಾಹಿತಿ ಪಡೆದುಕೊಂಡರು.

ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಚಿವ: ಬಳಿಕ ಸಚಿವರು ಊಟದ ವ್ಯವಸ್ಥೆ ಸೇರಿ ಹಾಸ್ಟೆಲ್​ನ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಡುಗೆ ಮನೆಗೆ ತೆರಳಿ ವಾಪಸ್ ಆದ ಸಚಿವ ಮಹದೇವಪ್ಪ ಅವರು ಅಂಗರಕ್ಷಕನ ಕೈಯಿಂದ ಶೂ ಹಾಕಿಸಿಕೊಂಡ ಘಟನೆ ನಡೆಯಿತು. ಹಾಸ್ಟೆಲ್​ನ ಅಡುಗೆ ಮನೆಗೆ ಭೇಟಿ ನೀಡಿದ್ದ ಸಂದರ್ಭ ಸಚಿವರು ಶೂ ಹೊರಗಡೆಯೇ ಬಿಚ್ಚಿಟ್ಟಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ, ಟೀಕೆಗೆ ಕಾರಣವಾಗಿದೆ.

ಮಹದೇವಪ್ಪ ಸ್ಪಷ್ಟನೆ: ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಸಚಿವ ಮಹದೇವಪ್ಪ, ''ನಂಜನಗೂಡು ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕೆ ಓಡಾಡಿದ ಬಳಿಕ ಸೊಂಟಕ್ಕೆ ಪೆಟ್ಟಾಗಿತ್ತು. ಅಂದಿನಿಂದಲೂ ನನಗೆ ಸಮಸ್ಯೆ ಇದೆ, ಕುಳಿತರೆ ಬೇಗ ಏಳಲು ಆಗುವುದಿಲ್ಲ, ಬಗ್ಗಲೂ ಕೂಡ ಸಾಧ್ಯವಾಗೋದಿಲ್ಲ. ನಾನು ದುರಹಂಕಾರದಿಂದ ಹಾಗೆ ಮಾಡಿದ್ದಲ್ಲ'' ಎಂದಿದ್ದಾರೆ.

ಇದನ್ನೂ ಓದಿ: ಹಂಪಿಯಲ್ಲಿ ವೀರ ಮಕ್ಕಳ ಕುಣಿತಕ್ಕೆ ಸಿಎಂ ಸಿದ್ದರಾಮಯ್ಯ ಭರ್ಜರಿ ಸ್ಟೆಪ್ಸ್: ವಿಡಿಯೋ

ಇದನ್ನೂ ಓದಿ : ಮಳೆ ಇಲ್ಲದೇ ಕಂಗ್ಗೆಟ್ಟಿದ ರೈತರಿಗೆ ಹೊಡೆತ ಕೊಟ್ಟ ವರುಣ: ನೆಲಕಚ್ಚಿದ ಭತ್ತದ ಪೈರು..

Last Updated : Nov 8, 2023, 4:59 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.