ಕೊಪ್ಪಳದಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ: ವ್ಯಕ್ತಿ ಮೇಲೆ ಕೇಸ್ ದಾಖಲು - Electricity bill payment
🎬 Watch Now: Feature Video
ಕೊಪ್ಪಳ: ವಿದ್ಯುತ್ ಬಿಲ್ ಬಾಕಿ ಕೇಳಿದ್ದಕ್ಕೆ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ಕೊಪ್ಪಳದ ಕುಕನಪಳ್ಳಿ ಗ್ರಾಮದಲ್ಲಿ ಮಂಗಳವಾರ ಜರುಗಿದೆ. ಕುಕನಪಳ್ಳಿ ಗ್ರಾಮದ ಚಂದ್ರಶೇಖರಯ್ಯ ಹಿರೇಮಠ ಎಂಬುವವರು ಜೆಸ್ಕಾಂ ಸಿಬ್ಬಂದಿ ಮಂಜುನಾಥ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಚಂದ್ರಶೇಖರಯ್ಯ ಅವರು ಬಿಲ್ ಪಾವತಿಸಿಲ್ಲ. ಸುಮಾರು 9,990 ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದರಿಂದ ಬಿಲ್ ಪಾವತಿಸುವಂತೆ ಕೇಳಲು ತೆರಳಿದಾಗ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಂಜುನಾಥ್ ಆರೋಪ ಮಾಡಿದ್ದಾರೆ. ಘಟನೆಯ ಕುರಿತು ಜೆಸ್ಕಾಂ ಸಿಬ್ಬಂದಿಯು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಈ ದೂರಿನ ಹಿನ್ನೆಲೆ ಚಂದ್ರಶೇಖರಯ್ಯ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಿಗೋಡೆ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ವಿದ್ಯುತ್ ಬಿಲ್ ಪಾವತಿಗೆ ಜನರು ಹಿಂದೇಟು ಹಾಕುತ್ತಿರುವ ಘಟನೆಗಳು ರಾಜ್ಯದ ಅಲ್ಲಲ್ಲಿ ಪ್ರತಿದಿನ ನಡೆಯುತ್ತಲೇ ಇವೆ. ಇದೀಗ ಕೊಪ್ಪಳದ ಕುಕನಪಳ್ಳಿ ಗ್ರಾಮದಲ್ಲಿಯೂ ಅಂತಹದ್ದೇ ಘಟನೆ ನಡೆದಿದೆ.
ಇದನ್ನೂ ಓದಿ: ಬಂಟ್ವಾಳ ಮಾಣಿ ಜಂಕ್ಷನ್ದಲ್ಲಿ ಗಂಪು ಘರ್ಷಣೆ, ಇಬ್ಬರು ಆಸ್ಪತ್ರೆಗೆ ದಾಖಲು: ಬಸವನಬಾಗೇವಾಡಿಯಲ್ಲಿ ಉದ್ಯಮಿ ಮೇಲೆ ಹಲ್ಲೆ ಯತ್ನ