ಕಲಬುರಗಿ: ವೃದ್ದಾಶ್ರಮದಲ್ಲಿ ಅಭಿಮಾನಿಗಳಿಂದ ಅಪ್ಪು ಜನ್ಮದಿನ ಆಚರಣೆ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
ಕಲಬುರಗಿ: ಅಸಂಖ್ಯಾತ ಅಭಿಮಾನಿಗಳ ಬಳಗವನ್ನು ಹೊಂದಿರುವ ಕರುನಾಡಿನ ಮನೆ ಮಗ ಪುನೀತ್ ರಾಜಕುಮಾರ್ ಅವರ 48ನೇ ಹುಟ್ಟುಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಕಲಬುರಗಿಯಲ್ಲಿ ವೃದ್ದಾಶ್ರಮದ ವಯೋ ವೃದ್ಧರಿಂದ ಕೇಕ್ ಕತ್ತರಿಸಿ ಮತ್ತು ಅಪ್ಪು ಭಾವಚಿತ್ರವನ್ನು ಮೆರವಣಿಗೆ ಮಾಡುವ ಮೂಲಕ ಜನ್ಮದಿನ ಆಚರಣೆ ಮಾಡಲಾಯಿತು.
ಅಪ್ಪು ಅಭಿಮಾನಿಗಳು ಕಲಬುರಗಿ ಹೊರವಲಯದಲ್ಲಿರುವ ಮಹಾದೇವಿ ತಾಯಿ ವೃದ್ಧಾಶ್ರಮದಲ್ಲಿ ಪುನೀತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ವಯೋ ವೃದ್ಧರಿಂದ ಕೇಕ್ ಕತ್ತರಿಸಿ ಮತ್ತು ಅವರಿಗೆ ಊಟ ಹಾಕಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನ ಆಚರಣೆ ಮಾಡಿದರು. ಅಪ್ಪು ಅಭಿಮಾನಿಗಳ ಈ ಕಾರ್ಯಕ್ಕೆ ವೃದ್ದರು ಸಂತಸ ವ್ಯಕ್ತಪಡಿಸಿದರು.
ಇನ್ನೊಂದಡೆ ಅಪ್ಪು ಅಡ್ಡ ಬಾಯ್ಸ್ ಅಭಿಮಾನಿ ಬಳಗ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಸಂಭ್ರಮದಿಂದ ಆಚರಿಸಿ ನೂರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಅವರ 48ನೇ ವರ್ಷದ ಜನ್ಮ ದಿನ ಪ್ರಯುಕ್ತ 48 ಕೆಜಿ ತೂಕದ ಕೇಕ್ ಕತ್ತರಿಸಿ ಪವರ್ ಸ್ಟಾರ್ ಪುನೀತ್ ಅವರನ್ನು ನೆನೆದರು.
ಇದನ್ನೂ ಓದಿ:ಪುನೀತ್ ಬರ್ತ್‌ಡೇ ದಿನವೇ 'ಕಬ್ಜ' ರಿಲೀಸ್; ಅಭಿಮಾನಿಗಳ ಸಂಭ್ರಮ- ವಿಡಿಯೋ