ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ ಪರ ನಟ ಸುದೀಪ್ ಅಬ್ಬರದ ಪ್ರಚಾರ - ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ
🎬 Watch Now: Feature Video
ಯಾದಗಿರಿ: ಜಿಲ್ಲೆಯ ಶಹಾಪುರ ಮತಕ್ಷೇತ್ರದ ಕೆಂಭಾವಿ ಪಟ್ಟಣಕ್ಕೆ ಬುಧವಾರ ಆಗಮಿಸಿದ ಚಿತ್ರನಟ ಸುದೀಪ್, ಶಹಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ ಪಾಟೀಲ್ ಯಾಳಗಿ ಪರ ಭರ್ಜರಿ ರೋಡ್ ಶೋ ನಡೆಸಿದರು. ಜನಸಾಗರದ ಮಧ್ಯೆಯೇ ಸುದೀಪ್ ಅಬ್ಬರದ ಪ್ರಚಾರ ನಡೆಸಿದರು. ತಮ್ಮ ನೆಚ್ಚಿನ ಚಿತ್ರನಟ ಸುದೀಪ್ರನ್ನು ಕಣ್ಮುಂಬಿಕೊಳ್ಳಲು ಅಪಾರ ಸಂಖ್ಯೆಯ ಅಭಿಮಾನಿಗಳು ಸೇರಿದ್ದರು.
ಮತದಾರರನ್ನು ಉದ್ದೇಶಿಸಿ ಮಾತನಾಡಿದ ಚಲನಚಿತ್ರನಟ ಸುದೀಪ್, ''ಬಿಜೆಪಿ ಪಕ್ಷದಲ್ಲಿ ಕೆಲ ನಾಯಕರ ಒಳ್ಳೆಯ ಗುಣಗಳನ್ನು ನೋಡಿ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೇನೆ. ಶಹಾಪುರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೀನ್‌ರೆಡ್ಡಿ ಅವರ ಹಠ, ಜನರ ಭಾವನೆಗಳಿಗೆ ಸ್ಪಂದಿಸುವ ರೀತಿಯನ್ನು ಕೇಳಿ ತಿಳಿದುಕೊಂಡಿದ್ದೇನೆ. ಜನರು ನಿಮ್ಮ ಬಗ್ಗೆ ಅಪಾರವಾದ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಅವರ ಭರವಸೆಯನ್ನು ಈಡೇರಿಸಲು ಮತದಾರರು ನಿಮ್ಮ ಅಮೂಲ್ಯವಾದ ಮತ ನೀಡಬೇಕು'' ಎಂದು ಮನವಿ ಮಾಡಿದರು.
ಶಾಸಕ ಚಲುವಾದಿ ನಾರಾಯಣಸ್ವಾಮಿ ಮಾತನಾಡಿ, ''ಯುವಕ ಅಮೀನ್‌ರೆಡ್ಡಿಗೆ ಉತ್ತಮ ಭವಿಷ್ಯವಿದ್ದು, ಸುಮಾರು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು'' ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ, ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರ, ರಾಜೂಗೌಡ ಉಕ್ಕನಾಳ, ಸಂಗಣ್ಣ ತುಂಬಗಿ, ಗುರು ಕಾಮಾ, ಶಂಕರ ಕರಣಗಿ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ನನ್ನ ಎಡಗಾಲಿನ ಚಪ್ಪಲಿ ಖರೀದಿ ಮಾಡಲು ಸಹ ಸಾಧ್ಯವಿಲ್ಲ : ಜೆಡಿಎಸ್ ಅಭ್ಯರ್ಥಿ ಬಚ್ಚೇಗೌಡ ಕೆಂಡಾಮಂಡಲ