ದರ್ಗಾಕ್ಕೆ ಭೇಟಿ ನೀಡಲು ಬಂದು ಕೃಷ್ಣಾ ನದಿ ಪಾಲಾದ ಯುವಕ: ಮುಂದುವರಿದ ಶೋಧ - ಸಿರಾಜುದ್ದೌಲ ದರ್ಗಾ
🎬 Watch Now: Feature Video
ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಹೊರ ವಲಯದಲ್ಲಿರುವ ಸಿರಾಜುದ್ದೌಲ ದರ್ಗಾಕ್ಕೆ ಭೇಟಿ ನೀಡಲು ಆಗಮಿಸಿದ್ದ ಮೂವರು ಯುವಕರು ಕೃಷ್ಣಾ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಈ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇನ್ನೋರ್ವ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬೆಳಗಾವಿಯ ಗಾಂಧಿ ನಗರದ ನಿವಾಸಿ ಹುಸೇನ್ ಅರಕಟ್ಟೆ ನೀರು ಪಾಲಾದ ಯುವಕ. ನಿನ್ನೆ ರವಿವಾರವಾದ ಹಿನ್ನೆಲೆ ದರ್ಗಾಕ್ಕೆ ಕುಟುಂಬಸ್ಥರೊಂದಿಗೆ ಆಗಮಿಸಿದ್ದರು. ನದಿ ದಂಡೆಯ ಮೇಲೆ ಮೂವರು ಸ್ನೇಹಿತರು ಕುಳಿತು ನಿಸರ್ಗ ಸೌಂದರ್ಯವನ್ನು ನೋಡುತ್ತಿದ್ದಾಗ ಆಯಾ ತಪ್ಪಿ ಹುಸೇನ್ ನದಿಗೆ ಬಿದಿದ್ದಾನೆ. ಈ ವೇಳೆ, ಅಕ್ಕ ಪಕ್ಕದ ಸ್ನೇಹಿತರ ಕೈ ಹಿಡಿದುಕೊಂಡಿದ್ದು, ಮೂವರು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಸ್ಥಳೀಯರು ಇಬ್ಬರು ಯುವಕರನ್ನು ರಕ್ಷಣೆ ಮಾಡಿ ಮೇಲೆತ್ತಿದ್ದಾರೆ. ಇನ್ನೋರ್ವ ಯುವಕ ಕೃಷ್ಣೆಯ ಪಾಲಾಗಿದ್ದು, ಆತನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ನುರಿತ ಮೀನುಗಾರರು ಸ್ಥಳೀಯರು ಜೊತೆಗೂಡಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : ಫೋಟೋ ತೆಗೆದುಕೊಳ್ಳಲು ಹೋಗಿ ಅಲೆಯ ಹೊಡೆತಕ್ಕೆ ಸಿಲುಕಿದ ಆರು ಮಂದಿ ಸ್ನೇಹಿತರು: ಒಬ್ಬ ಸಾವು