ಔಷಧಕ್ಕೆಂದು ಮೆಡಿಕಲ್ ಶಾಪ್ಗೆ ಬಂದ ವ್ಯಕ್ತಿ ಹೃದಯಾಘಾತದಿಂದ ಸಾವು - ದೃಶ್ಯ ಮೆಡಿಕಲ್ ಶಾಪ್ನ ಸಿಸಿಟಿವಿಯಲ್ಲಿ ಸೆರೆ
🎬 Watch Now: Feature Video
Published : Oct 5, 2023, 10:07 AM IST
ಮೈಸೂರು: ಮೆಡಿಕಲ್ ಶಾಪ್ಗೆ ಔಷಧ ತಗೆದುಕೊಳ್ಳಲು ಬಂದ ವ್ಯಕ್ತಿಯೊಬ್ಬರು ಮೆಡಿಕಲ್ ಶಾಪ್ ಬಾಗಿಲಲ್ಲೇ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಳೆದ ಮಂಗಳವಾರ ನಗರದ ಕ್ಯಾತಾಮರನಹಳ್ಳಿ ಮೆಡಿಕಲ್ ಶಾಪ್ ಬಳಿ ನಡೆದಿದೆ.
ಈ ದೃಶ್ಯ ಮೆಡಿಕಲ್ ಶಾಪ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವ್ಯಕ್ತಿಯೊಬ್ಬರು ಎದೆ ಉಜ್ಜುತ್ತಾ ಮೆಡಿಕಲ್ ಶಾಪ್ಗೆ ಬಂದು, ಔಷಧ ಕೇಳುತ್ತಿರುವುದು. ಶಾಪ್ ಎದುರು ನಿಂತ ಸ್ವಲ್ಪ ಹೊತ್ತಲ್ಲೇ ಕುಸಿದು ಬಿದ್ದಿರುವುದು. ಅಂಗಡಿಯವರು ಓಡಿ ಹೋಗಿ ವಿಚಾರಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಗರದ ಕ್ಯಾತಾಮರನಹಳ್ಳಿಯ ಮೆಡಿಕಲ್ ಶಾಪ್ಗೆ ಔಷಧ ತಗೆದುಕೊಳ್ಳಲು ಬಂದ ಜಗದೀಶ್ (38) ಹೃದಯಾಘಾತದಿಂದ ಮೆಡಿಕಲ್ ಶಾಪ್ ಕೌಂಟರ್ ಎದುರೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಔಷಧ ತಗೆದುಕೊಳ್ಳಲು ಮೆಡಿಕಲ್ ಶಾಪ್ಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಜಗದೀಶ್ ಅವರು ಕ್ಯಾತಾಮರನಹಳ್ಳಿಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಈ ಘಟನೆ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬಾರ್ ಕ್ಯಾಶಿಯರ್ಗೆ ಚಾಕು ಇರಿದ ದುಷ್ಕರ್ಮಿಗಳು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ