ಶೂ ಒಳಗೆ ಬೆಚ್ಚಗೆ ಕುಳಿತ ಹಾವು: ವಿಡಿಯೋ - ಕೊಯಮತ್ತೂರು ಜಿಲ್ಲೆಯ ವೆಳ್ಳಾಲೂರ್ ವೆಂಕಟೇಶ್ವರ ನಗರ
🎬 Watch Now: Feature Video
Published : Nov 10, 2023, 10:56 AM IST
ಕೊಯಮತ್ತೂರು(ತಮಿಳುನಾಡು): ಕೊಯಮತ್ತೂರು ಜಿಲ್ಲೆಯ ವೆಳ್ಳಾಲೂರ್ ವೆಂಕಟೇಶ್ವರ ನಗರ ಪ್ರದೇಶದಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಶೂ ಸ್ಟ್ಯಾಂಡ್ ಬಳಿ ಹೋಗಿದ್ದಾನೆ. ಈ ವೇಳೆ ಶೂನಿಂದ ಏನೋ ವಿಚಿತ್ರ ಶಬ್ದ ಬರುತ್ತಿರುವುದು ಆತನಿಗೆ ಕೇಳಿಸಿದ್ದು, ನಂತರ ಶೂ ಸಮೀಪ ನೋಡಿದಾಗ ಒಳಗೆ ಹಾವು ಇರುವುದು ಕಂಡುಬಂದಿದೆ.
ಹಾವು ನೋಡಿ ಗಾಬರಿಗೊಂಡ ವಿದ್ಯಾರ್ಥಿ ಕೂಡಲೇ ತಂದೆ- ತಾಯಿ ಬಳಿ ಹೋಗಿ ವಿಷಯ ತಿಳಿಸಿದ್ದಾನೆ. ಬಳಿಕ ಪೋಷಕರು ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಪ್ರತಿಷ್ಠಾನದ ಹಾವು ಹಿಡಿಯುವ ಮೋಹನ್ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ, ಹಾವು ಹಿಡಿಯುವವರೊಬ್ಬರು ಬಂದು ಸುರಕ್ಷಿತವಾಗಿ ಸೆರೆ ಸಿಕ್ಕ ನಾಗಪ್ಪನನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟರು. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಮಳೆಗಾಲದಲ್ಲಿ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಶ್ರಯ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಮನೆಯ ಅಕ್ಕಪಕ್ಕ ಸುತ್ತಾಡುತ್ತಿರುತ್ತವೆ. ಆದ್ದರಿಂದ ಎಚ್ಚರಿಕೆ ವಹಿಸುವುದು ಮುಖ್ಯ.
ಇದನ್ನೂ ಓದಿ : ನಾಗರಹಾವನ್ನೇ ಇನ್ನೊಂದು ನಾಗರಹಾವು ನುಂಗಿದ ವಿಚಿತ್ರ ಘಟನೆ... ವಿಡಿಯೋವನ್ನೊಮ್ಮೆ ನೋಡಿ ಬಿಡಿ!!