ಮನೆಯಲ್ಲಿ 80 ಮೊಟ್ಟೆಯಿಟ್ಟ ಹಾವು; ಕೊಂದು ಹಾಕಿದ ಜನರು! - ರೋಣಿ ಹರ್ಜಿಪುರ ಗ್ರಾಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18234026-thumbnail-16x9-sanju.jpg)
ಮುಜಾಫರ್‌ನಗರ: ಇಲ್ಲಿನ ಚಾರ್ತಾವಾಲ್ ಪೊಲೀಸ್ ಠಾಣಾ ವ್ಯಾಪ್ತಿಯ ರೋನಿ ಹರ್ಜಿಪುರ ಗ್ರಾಮದ ಮನೆಯೊಂದರಲ್ಲಿ ಹಾವೊಂದು 80 ಮೊಟ್ಟೆಗಳನ್ನು ಇಟ್ಟಿದೆ. ಇದರಿಂದ ಮನೆಮಂದಿ ಹಾಗು ಗ್ರಾಮಸ್ಥರು ಭಯಭೀತರಾಗಿದ್ದರು. ಮಂಗಳವಾರ ಹಾವು ಮನೆಯೊಳಗೆ ಬಂದಿದ್ದು ಕುಟುಂಬಸ್ಥರು ಅದನ್ನು ಹೊಡೆದು ಸಾಯಿಸಿದ್ದಾರೆ. ಹಾವು ಹಾಗೂ ಅದರ ಮೊಟ್ಟೆಗಳನ್ನು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ಸರ್ಪವೊಂದನ್ನು ಕೊಂದಿದ್ದಕ್ಕೆ ಹಾವು ಪ್ರತೀಕಾರ ತೀರಿಸಿಕೊಂಡಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಐದು ವರ್ಷಗಳ ಹಿಂದೆ ರೋಣಿ ಹರ್ಜಿಪುರ ಗ್ರಾಮದ ಸಲೀಂ ಎಂಬವರ ಮನೆಯಲ್ಲಿ ಜೋಡಿ ನಾಗರ ಹಾವು ಪತ್ತೆಯಾಗಿತ್ತು. ಅವುಗಳನ್ನು ಕಂಡು ಇವರ ಮನೆಯವರು ಗಾಬರಿಗೊಂಡಿದ್ದರು. ಕೋಲುಗಳಿಂದ ಒಂದು ಹಾವನ್ನು ಕೊಂದು ಹಾಕಿದ್ದರು. ಹೇಗೋ ಒಂದು ಸರ್ಪ ತಪ್ಪಿಸಿಕೊಂಡು ಹೋಗಿತ್ತಂತೆ. ಕೆಲವು ದಿನಗಳ ನಂತರ ಅದು ಮತ್ತೆ ಬಂದು 15 ವರ್ಷದ ಮಗನಿಗೆ ಕಚ್ಚಿದೆ. ಈ ಘಟನೆಯನ್ನು ಇಲ್ಲಿನ ಜನರು ಇಂದಿಗೂ ನೆನಪು ಮಾಡಿಕೊಳ್ತಿದ್ದಾರೆ.
ಇದನ್ನೂ ಓದಿ : ಎದೆ ಝಲ್ ಎನಿಸುವ 11 ಅಡಿ ಉದ್ದದ ಕಾಳಿಂಗ ಸರ್ಪ! ನೋಡಿ ವಿಡಿಯೋ