ರಾಹುಲ್ ಗಾಂಧಿ ಪ್ರವಾಸಕ್ಕೆ ಬಂದ್ರೆ ಅದರ ಖರ್ಚನ್ನು ನಾನೇ ಭರಿಸುವೆ: ಸಚಿವ ಈಶ್ವರಪ್ಪ - ರಾಹುಲ್ ಗಾಂಧಿ ಕುರಿತು ಕೆ ಎಸ್ ಈಶ್ವರಪ್ಪ ವ್ಯಂಗ್ಯ
🎬 Watch Now: Feature Video
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದಲ್ಲಿ ಕಾಲಿಟ್ಟ ಕಡೆ ಕಾಂಗ್ರೆಸ್ ಸರ್ವನಾಶವಾಗಿದೆ. ರಾಜ್ಯಕ್ಕೆ ಬಂದ್ರೂ ಅದೇ ಗತಿಯಾಗಲಿದೆ ಎಂದು ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ. ಅಂಕೋಲಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಂದೆ ಅವರು ರಾಜ್ಯ ಪ್ರವಾಸಕ್ಕೆ ಬರ್ತಾರೆ ಅಂದ್ರೆ ರಾಹುಲ್ ಗಾಂಧಿ ಹೋಗಿ ಬರುವ ಖರ್ಚು-ವೆಚ್ಚವನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು. ಅಮಿತ್ ಶಾ ರಾಜ್ಯ ಪ್ರವಾಸದ ಬಳಿಕ ಸಚಿವ ಸಂಪುಟದಲ್ಲಿ ಬದಲಾವಣೆ ಜತೆಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಸಾಧ್ಯತೆ ಕುರಿತು ಮಾತನಾಡಿದ ಅವರು, ಕಾದು ನೋಡಿ ಎಂದರು. ಅಲ್ಲದೆ, ಈಗ ಕಾಂಗ್ರೆಸ್ನವರಿಗೆ ಢವ ಢವ ಶುರುವಾಗಿದೆ. ಅಮಿತ್ ಶಾ ಬರ್ಬೇಕಿದ್ರೆ ರಾಷ್ಟ್ರದ್ರೋಹಿಗಳ ವಿರುದ್ಧ ಬಾಂಬ್ ತೆಗೆದುಕೊಂಡೇ ಬಂದಿದ್ದಾರೆ ಎಂದರು.
Last Updated : Feb 3, 2023, 8:22 PM IST