ಅಪ್ಪು ಹುಟ್ಟುಹಬ್ಬದ ದಿನ ಜೇಮ್ಸ್ ರಿಲೀಸ್: ಸ್ವಾಗತಕ್ಕೆ ಅಭಿಮಾನಿಗಳು ಸಜ್ಜು - ಕಲಬುರಗಿಯ ಅಪ್ಪು ಅಭಿಮಾನಿಗಳಲ್ಲಿ ಜೇಮ್ಸ್ ಹಬ್ಬದ ಸಂಭ್ರಮ
🎬 Watch Now: Feature Video
ಕಲಬುರಗಿ: ದಿ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ನಾಳೆ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ತೊಗರಿ ನಾಡು ಕಲಬುರಗಿಯ ಅಪ್ಪು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜೇಮ್ಸ್ ಚಿತ್ರದ ಭರ್ಜರಿ ಸ್ವಾಗತಕ್ಕೆ ಅವರು ಸಜ್ಜಾಗಿದ್ದಾರೆ. ಶೆಟ್ಟಿ ಮಲ್ಟಿಫ್ಲೆಕ್ಸ್, ಸಂಗಮ, ತ್ರಿವೇಣಿ, ಮೀರಜ್ ಚಿತ್ರಮಂದಿಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದ್ದು, ಚಿತ್ರಮಂದಿರಗಳ ಮುಂದೆ ಅಪ್ಪು ಅವರ ಬೃಹತ್ ಕಟೌಟ್, ಫ್ಲೆಕ್ಸ್, ಬ್ಯಾನರ್ಗಳು ರಾರಾಜಿಸುತ್ತಿವೆ.
Last Updated : Feb 3, 2023, 8:20 PM IST