ಲಘು ವಿಮಾನ ಪತನ: ಸ್ಥಳದಲ್ಲೇ ನಾಲ್ವರ ದುರ್ಮರಣ - 4 killed in small plane crash,
🎬 Watch Now: Feature Video

ಸಣ್ಣ ವಿಮಾನ ಪತನಗೊಂಡಿದ್ದು, ಸುಮಾರು ನಾಲ್ವರು ಸಾವನ್ನಪ್ಪಿರುವ ಘಟನೆ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾ ವಾಯುನೆಲೆಯಲ್ಲಿ ನಡೆದಿದೆ. ಟೇಕ್ ಆಫ್ ಆದ ಕೆಲಕ್ಷಣಗಳಲ್ಲೇ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೂರ್ವ ಲಾಸ್ ಏಂಜಲೀಸ್ನಿಂದ 40 ಮೈಲಿ ದೂರದಲ್ಲಿರುವ ಕರೋನಾ ಮುನ್ಸಿಪಲ್ ವಿಮಾನ ನಿಲ್ದಾಣದ ಬಳಿ ದುರಂತ ಸಂಭವಿಸಿದೆ. ಘಟನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು.