ಶಿವಮೊಗ್ಗದಲ್ಲಿ ಬೇಸಿಗೆಯಲ್ಲೂ ಆಲಿಕಲ್ಲು ಮಳೆ.. ಬಾಳೆ, ತೋಟಗಾರಿಕ ಬೆಳೆಗಳಿಗೆ ಹಾನಿ - hailrain in shivamogga
🎬 Watch Now: Feature Video
ಶಿವಮೊಗ್ಗ: ಸಂಜೆ ದಿಢೀರನೆ ಸುರಿದ ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕಾ ಬೆಳೆ ಹಾಗೂ ಬಾಳೆ ಬೆಳೆ ಹಾನಿಯಾಗಿರುವ ಘಟನೆ ತಾಲೂಕಿನ ಸಿರಿಗೆರೆ ಗ್ರಾಮದಲ್ಲಿ ನಡೆದಿದೆ. ಅಲ್ಲದೆ ಆಯನೂರು ಸುತ್ತಮುತ್ತಲಿನ ಚನ್ನಹಳ್ಳಿ, ಸಿರಿಗೆರೆ, ಹೊಸಹಳ್ಳಿ ಇತರೆ ಗ್ರಾಮಗಳಲ್ಲಿ ಅಲಿಕಲ್ಲು ಮಳೆಯಿಂದ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಫಸಲಿಗೆ ಬಂದಿದ್ದ ಬಾಳೆ ಬೆಳೆ ನಾಶವಾಗಿದ್ದು, ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ. ಶಿವಮೊಗ್ಗ ನಗರದಲ್ಲಿಯೂ ಕೆಲಹೊತ್ತು ಮಳೆ ಸುರಿದಿದೆ.
Last Updated : Feb 3, 2023, 8:21 PM IST