ಪಾದಾಚಾರಿಗಳ ಹೆಗಲ ಮೇಲೆ ಹತ್ತಿ ಕೂರುವ ಮಂಗ: ರೋಸಿ ಹೋದ ಜನ - ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಕೋತಿ ನ್ಯೂಸ್
🎬 Watch Now: Feature Video
ಮಂಗನ ಕಾಟಕ್ಕೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರದ ಸಾರ್ವಜನಿಕರು ರೋಸಿ ಹೋಗಿದ್ದಾರೆ. ನಗರದ ನೆಹರು ವೃತ್ತದಲ್ಲಿ ಸಂಚರಿಸುವ ಪಾದಾಚಾರಿಗಳ ಹೆಗಲ ಮೇಲೆ ಹತ್ತಿ ಕೂರುವ ಮೂಲಕ ಕಾಟ ಕೊಡುತ್ತಿದೆ. ಮೈಮೇಲೆ ಹಾರುತ್ತಿರುವ ಮಂಗವನ್ನು ಕಂಡ ಜನ್ರು ಭಯಭೀತರಾಗಿದ್ದಾರೆ. ಅಷ್ಟೇ ಅಲ್ಲದೆ ಸುಮ್ಮನೆ ಇರದ ಮಂಗ ಹೋಟೆಲ್ಗಳಿಗೆ ನುಗ್ಗಿ, ತಿನಿಸುಗಳನ್ನು ಹಾಳು ಮಾಡುತ್ತಿರುವುದಕ್ಕೆ ಅಂಗಡಿ ಮಾಲೀಕರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು ಹದಿನೈದು ದಿನಗಳಿಂದ ಕೋತಿ ಉಪಟಳ ನೀಡುತ್ತಿದ್ದು, ರೋಸಿ ಹೋದ ಜನತೆ ಮಂಗವನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.