ಶರಣು ಸಲಗರ ಹಾಗೂ ನಾನು ಜೋಡೆತ್ತಿನ ಹಾಗೆ ಕೆಲಸ ಮಾಡುತ್ತೇವೆ: ಸಚಿವ ಪ್ರಭು ಚವ್ಹಾಣ್ - ಬಸವಕಲ್ಯಾಣ ಉಪಚುನಾವಣೆ ಫಲಿತಾಂಶ
🎬 Watch Now: Feature Video
ಬಸವಕಲ್ಯಾಣ : ನೂತನ ಶಾಸಕ ಶರಣು ಸಲಗರ ಹಾಗೂ ನಾನು ಜಿಲ್ಲೆಯಲ್ಲಿ ಜೋಡೆತ್ತಿನ ಹಾಗೆ ಕೆಲಸ ಮಾಡುತ್ತೇವೆ ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ಬಸವಕಲ್ಯಾಣ ಉಪಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ಅಭಿನಂದನೆ ಸಲ್ಲಿಸಿ, ಮತದಾರರಿಗೆ ಸಚಿವರು ಧನ್ಯವಾದ ಅರ್ಪಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ನಾವು ಇಬ್ಬರೂ ಜೋಡೆತ್ತಿನ ಹಾಗೆ ಕೆಲಸಮಾಡುತ್ತೇವೆ. ನನ್ನ ಅನುಭವವನ್ನು ಶರಣು ಅವರಿಗೆ ಧಾರೆ ಎರೆಯುವೆ. ಕೋವಿಡ್ ನಿಯಂತ್ರಣಕ್ಕೆ ಮೊದಲು ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.