ಉರುಳು ಸೇವೆ ಮೂಲಕ ಪ್ರತಿಭಟಿಸಿದ ಬೆಣ್ಣೆನಗರಿ ಕನ್ನಡ ಹೋರಾಟಗಾರರು - davanagere karnataka band update
🎬 Watch Now: Feature Video

ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ 28 ಸಂಘಟನೆಗಳು ಇಂದು ಬಂದ್ಗೆ ಕರೆ ನೀಡಿವೆ. ದಾವಣಗೆರೆಯಲ್ಲಿ ನಡೆಸಿದ ಬಂದ್ ನಗರದ ಜಯದೇವ ವೃತ್ತಕ್ಕೆ ಮಾತ್ರ ಸೀಮಿತವಾಯಿತು. ಕನ್ನಡ ಪರ ಸಂಘಟನೆಗಳ ಒಕ್ಕೂಟಗಳು ಜಯದೇವ ವೃತ್ತದಲ್ಲಿ ಉರುಳು ಸೇವೆ ಮಾಡುವ ಮೂಲಕ ಬಂದ್ ಆರಂಭಿಸಿದರು. ಅಂಗಡಿ ಹೋಟೆಲ್ಗಳನ್ನು ಬಂದ್ ಮಾಡದೇ ಮಾಲೀಕರು ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸುವುದಿಲ್ಲ ಎಂದು ತಿಳಿಸಿದರು. ಆದರೆ ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ ನಗರಾದಂತ್ಯ ತೆರೆದಿರುವ ಅಂಗಡಿಗಳ ಮಾಲೀಕರಿಗೆ ಗುಲಾಬಿ ಹೂವು ನೀಡುವ ಮೂಲಕ ಅಂಗಡಿಗಳನ್ನು ಮುಚ್ಚಿ, ಬಂದ್ಗೆ ಬೆಂಬಲಿಸುವಂತೆ ಮನವಿ ಮಾಡಿದರು.