ಬೆಂಗಳೂರಿನಲ್ಲಿ ಕೇಳಿಬಂದ ನಿಗೂಢ ಶಬ್ದದ ಆಡಿಯೋ - ಬೆಂಗಳೂರಿನಲ್ಲಿ ಕೇಳಿಬಂದ ನಿಗೂಢ ಶಬ್ದ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7276441-thumbnail-3x2-lek.jpg)
ಬೆಂಗಳೂರು: ನಗರದ ಕೆಲವು ಭಾಗಗಳಲ್ಲಿ ದೊಡ್ಡದಾದ ಗುಡುಗು ರೀತಿಯ ಭಾರಿ ಶಬ್ದವೊಂದು ಕೇಳಿ ಬಂದಿದ್ದು, ಏನಾಗಿರಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪರಿಶೀಲಿಸುತ್ತಿದೆ. ಇಂಟರ್ನ್ಯಾಷನಲ್ ಏರ್ಪೋರ್ಟ್, ಕಲ್ಯಾಣ್ ನಗರ್, ಎಂಜಿ ರೋಡ್, ಮಾರತ್ ಹಳ್ಳಿ, ವೈಟ್ ಫೀಲ್ಡ್, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿಯಿಂದ ಹೆಬ್ಬಗೋಡಿವರೆಗೂ ದೊಡ್ಡದಾದ ಶಬ್ದ ಕೇಳಿ ಬಂದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಎಲ್ಲೂ ಯಾವುದೇ ಹಾನಿ ಸಂಭವಿಸಿಲ್ಲ. ಯುದ್ಧ ವಿಮಾನಗಳಾದ ‘ಸೂಪರ್ ಸಾನಿಕ್’ ವೇಗದಲ್ಲಿ ಹಾರಾಟ ನಡೆಸುವಾಗ ಕೇಳುವ ಶಬ್ದವೇ ಎಂಬುದನ್ನು ಪರಿಶೀಲಿಸಿ ಎಂದು ಏರ್ಫೋರ್ಸ್ ಅಧಿಕಾರಿಗಳಲ್ಲಿ ಕೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.
Last Updated : May 20, 2020, 4:23 PM IST