ರಾಜಸ್ಥಾನ: ಯುವಕ ಸಜೀವ ದಹನ, ಕೊಲೆ ಶಂಕೆ! - ದ್ವಿಚಕ್ರ ವಾಹನ ಸವಾರ ಸಜೀವ ದಹನ
🎬 Watch Now: Feature Video
ಸಿಕಾರ್ (ರಾಜಸ್ಥಾನ): ಜಿಲ್ಲೆಯ ದಾದಿಯಾ ಪೊಲೀಸ್ ಠಾಣಾ ಪ್ರದೇಶದ ಪಲಾಸಿಯಾ ಬಳಿ ನಿನ್ನೆ ತಡರಾತ್ರಿ ದ್ವಿಚಕ್ರ ವಾಹನ ಸವಾರ ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ಅಧಿಕಾರಿ ಬ್ರಿಜೇಶ್ ತೋಮರ್ ತಿಳಿಸಿದ್ದಾರೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಥಳೀಯರು ದಾದಿಯಾ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬೆಂಕಿ ನಂದಿಸಿ ಯುವಕನ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಪ್ರಬಲ ಶಂಕೆ ವ್ಯಕ್ತವಾಗಿದೆ. ಯುವಕನನ್ನು ಸುಡಲು ಯಾವ ರಾಸಾಯನಿಕವನ್ನು ಬಳಸಲಾಗಿದೆ ಎಂದು ತನಿಖೆ ಮಾಡಲು ಪೊಲೀಸರು ಎಫ್ಎಸ್ಎಲ್ ತಂಡವನ್ನು ಕರೆದಿದ್ದಾರೆ.