ಎರ್ನಾಕುಲಂ: ಅವಾಸಸ್ಥಾನ ಹುಡುಕಿ ಹೊರಟ 'ಇಂಡಿಯನ್ ವಿಸ್ಟಲಿಂಗ್ ಡಕ್ಸ್'; ವಿಡಿಯೋ - ತಟ್ಟಕ್ಕಾಡು ಅಭಯಾರಣ್ಯ
🎬 Watch Now: Feature Video
ಕೇರಳದ ಎರ್ನಾಕುಲಂ ಜಿಲ್ಲೆಯ ತಟ್ಟೆಕ್ಕಾಡು ಪಕ್ಷಿಧಾಮದಲ್ಲಿ 'ಇಂಡಿಯನ್ ವಿಸ್ಟಲಿಂಗ್' ಬಾತುಕೋಳಿಗಳು ಅಭಯಾರಣ್ಯ ಮತ್ತು ಸುತ್ತಮುತ್ತಲಿನ ಪೆರಿಯಾರ್ ನದಿಯ ಜಲಮೂಲಗಳು ಮತ್ತು ಸಣ್ಣ ಉಪನದಿಗಳು ಒಣಗಿ ಹೋಗಿದ್ದರಿಂದ ತಮ್ಮ ಆವಾಸಸ್ಥಾನ ಕಳೆದುಕೊಂಡಿವೆ. ಈ ಹಾರುವ ಕಾಡು ಬಾತುಕೋಳಿಗಳ ದೊಡ್ಡ ಪಡೆ, ವಾಸಿಸಲು ಅನುಕೂಲಕರ ಆವಾಸಸ್ಥಾನವನ್ನು ಹುಡುಕಿಕೊಂಡು ಭೂತಥಂಕೆಟ್ಟು ಪ್ರದೇಶಕ್ಕೆ ಸ್ಥಳಾಂತರಗೊಂಡಿವೆ. ಈ ಬಾತುಕೋಳಿಗಳು ನೀರಿನಲ್ಲಿ ಬೇಟೆಯಾಡಲು ಹೋಗುವ ರೀತಿ ಮತ್ತು ದೊಡ್ಡ ಗುಂಪು ಸೇರುವುದನ್ನು ನೋಡಲು ತಟ್ಟೆಕ್ಕಾಡಿನ ಪಕ್ಷಿ ವೀಕ್ಷಕರು ಮತ್ತು ಪ್ರವಾಸಿಗರು ಈ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಬರುತ್ತಿದ್ದಾರೆ.