‘ಅಟಲ್ ಸುರಂಗ’ ಉದ್ಘಾಟನೆ... 9 ಕಿ.ಮೀ. ಉದ್ದದ ಸುರಂಗಕ್ಕಾಗಿ 10 ವರ್ಷ ಶ್ರಮ! ವಿಡಿಯೋ - ಅಟಲ್ ಸುರಂಗ ಉದ್ಘಾಟಿಸಲಿರುವ ಮೋದಿ
🎬 Watch Now: Feature Video
ರೋಹ್ಟಂಗ್ನಲ್ಲಿ 2000ರ ಜೂನ್ 3ರಂದು ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಪಾಯ ಹಾಕಿದ್ದ ವಿಶ್ವದ ಅತಿ ಉದ್ದದ ಹೆದ್ದಾರಿ 'ಅಟಲ್ ಸುರಂಗ' ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ‘ಅಟಲ್ ಸುರಂಗ’ ಮಾರ್ಗವನ್ನು ಉದ್ಘಾಟಿಸಿದ್ದಾರೆ. 9.02 ಕಿ.ಮೀ ಉದ್ದದ ಸುರಂಗಕ್ಕಾಗಿ 10 ವರ್ಷಗಳ ಕಾಲ ಕೆಲಸ ಮಾಡಲಾಗಿದೆ. ಇದು ಮನಾಲಿ ಮತ್ತು ಲೇಹ್ ನಡುವೆ ಸಂಪರ್ಕ ಕಲ್ಪಿಸಲಿದೆ. 3,200 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ. ಮನಾಲಿ-ಲೇಹ್ ನಡುವಿನ ಅಂತರವನ್ನು 46 ಕಿ.ಮೀಗಳಷ್ಟು ಕಡಿಮೆ ಮಾಡಲಿದೆ. ಸಮುದ್ರಮಟ್ಟದಿಂದ ಈ ಸುರಂಗ 3 ಸಾವಿರ ಮೀಟರ್ ಎತ್ತರದಲ್ಲಿದ್ದು, ಚಳಿಗಾಲದಲ್ಲಿ ಇಲ್ಲಿ ತಾಪಮಾನ -30ರಿಂದ -40ರವರೆಗೆ ಕುಸಿಯುತ್ತದೆ.
Last Updated : Oct 3, 2020, 10:30 AM IST