ಮಹಾರಾಷ್ಟ್ರ ಕರಾವಳಿಗೆ ಅಪ್ಪಳಿಸಿದ ನಿಸರ್ಗ; ಬಿರುಗಾಳಿಗೆ ಕಿತ್ತುಹೋದ ಕಟ್ಟಡ ಮೇಲ್ಛಾವಣಿ- ವಿಡಿಯೋ - ಮುಂಬೈ
🎬 Watch Now: Feature Video
ಮಹಾರಾಷ್ಟ್ರದ ಕರಾವಳಿಗೆ ನಿಸರ್ಗ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಅವಾಂತರ ಸೃಷ್ಟಿಸಿದೆ. ಭೀಕರ ಬಿರುಗಾಳಿಗೆ ಬಹು ಅಂತಸ್ತಿನ ಕಟ್ಟಡದ ಮೇಲ್ಛಾವಣಿ ಹಾರಿ ಹೋಗಿದೆ. ಮುಂಬೈ, ರತ್ನಗಿರಿ, ಅಲಿಬಾಗ್ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಈಗಾಗಲೇ ಎನ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ಕೈಗೊಂಡಿದ್ದು, ತಗ್ಗು ಪ್ರದೇಶದಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.