ವಿಶ್ವ ಮಹಿಳಾ ದಿನದ ವಿಶೇಷ : ಸಾಂಪ್ರದಾಯಿಕ ಕೃಷಿ ಮೂಲಕ ಸಾಧನೆ ಮಾಡಿದ ರಾಹಿಬಾಯಿ.! - ರಾಹಿಬಾಯಿ ಪೊಪರೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6323983-thumbnail-3x2-rahibai.jpg)
ಅಹ್ಮದ್‌ನಗರ (ಮಹಾರಾಷ್ಟ್ರ) : ಮಹಾರಾಷ್ಟ್ರದ ಈ ವನಿತೆ ಭೂತಾಯಿಯ ಸೇವೆಗೆ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅಹ್ಮದ್‌ನಗರದ ರಾಹಿಬಾಯಿ ಪೊಪರೆಯವರ 20 ವರ್ಷಗಳ ಯಶೋಗಾಥೆ ಇದು. ಬೀಜಗಳ ಬ್ಯಾಂಕ್ ಪ್ರಾರಂಭಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಸುಮಾರು 245 ವಿವಿಧ ಬೆಳೆಗಳ ಬೀಜಗಳನ್ನು ರಾಹಿಬಾಯಿ ಪೊಪರೆ ಸಂಗ್ರಹಿಸಿದ್ದಾರೆ. ಶಾಲೆಯ ಮೆಟ್ಟಿಲನ್ನೇ ಏರದ ಇವರು, ಕೃಷಿ ಮೂಲಕ ಸಾಧನೆಯ ಶಿಖರ ಏರಿದವರು. 2 ರಿಂದ 3 ಎಕರೆ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿಯನ್ನು ಆರಂಭಿಸಿದ ರಾಹಿಬಾಯಿ, ಹೈಬ್ರಿಡ್ ಬೀಜಗಳು ಭೂಮಿಗೆ ಮಾರಕ ಎಂಬುದನ್ನು ಪ್ರತಿಪಾದಿಸುತ್ತಾರೆ. ಹಲವು ವಿಧದ ಬೆಳೆಗಳ ಬೀಜಗಳನ್ನು ಸಂಗ್ರಹಿಸಿ ಸಾಂಪ್ರದಾಯಿಕ ಕೃಷಿಯ ಮೂಲಕ ಬೀಜಗಳನ್ನು ಮರು ಉತ್ಪಾದನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಸಂಭ್ರಮದಂದು ರಾಹಿಬಾಯಿ ಅವರ ಯಶೋಗಾಥೆ ಇಲ್ಲಿದೆ ನೋಡಿ....