thumbnail

By

Published : Apr 22, 2021, 5:41 PM IST

ETV Bharat / Videos

ಆತ್ಮಹತ್ಯೆ ಉದ್ದೇಶದಿಂದಲೇ ರೈಲ್ವೆ ಟ್ರ್ಯಾಕ್​ ಮೇಲೆ ನಿಂತ ಬಾಲಕಿ.. ಓಡಿ ಹೋಗಿ ಜೀವ ಉಳಿಸಿದ ಪೊಲೀಸ್​

ಧನ್ಬಾದ್​​(ಜಾರ್ಖಂಡ್​): ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್​ಫಾರ್ಮ್​​ ಸಂಖ್ಯೆ 6 & 7 ರ ರೈಲ್ವೆ ಟ್ರ್ಯಾಕ್​​ ಮೇಲೆ ನಿಂತಿದ್ದ ಬಾಲಕಿವೋರ್ವಳನ್ನ ಆರ್​ಪಿಎಫ್​​ ಸಿಬ್ಬಂದಿ ರಕ್ಷಿಸಿರುವ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಬಾಲಕಿ ರೈಲ್ವೆ ಟ್ರ್ಯಾಕ್​ ಮೇಲೆ ನಿಂತಿದ್ದಳು. ಈ ವೇಳೆ ಅನೇಕರು ಸ್ಥಳದಲ್ಲಿದ್ದರೂ, ಆಕೆಯನ್ನು ರಕ್ಷಿಸಲು ಯಾರೂ ಕೂಡ ಮುಂದಾಗಲಿಲ್ಲ. ಈ ಹೊತ್ತಿಗೆ ರೈಲು ಹತ್ತಿರಕ್ಕೆ ಬರುತ್ತಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಆರ್​ಪಿಎಫ್​​ ಪೊಲೀಸ್​ ಓಡಿ ಹೋಗಿ ಬಾಲಕಿಯನ್ನು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಕಾರಣ ಕೇಳಿದಾಗ ಆಕೆ ಕಣ್ಣೀರು ಹಾಕಿದ್ದಾಳೆ ಎಂದು ತಿಳಿದುಬಂದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.