ಮೃತ ಕಾರ್ಯಕರ್ತನ ನೆರವಿಗೆ ಬಾರದ ನಾಯಕ; ಉಜ್ಜೈನಿ ಸಂಸದನಿಗೆ ಮೃತನ ಪತ್ನಿ ತರಾಟೆ ವಿಡಿಯೋ ವೈರಲ್ - ಆಮ್ಲಜನಕದ ಕೊರತೆಯಿಂದ ಕಾರ್ಯಕರ್ತ ಜಿತೇಂದ್ರ ಶೀರೆ ಸಾವು ‘
🎬 Watch Now: Feature Video
ಉಜ್ಜೈನಿ(ಮಧ್ಯಪ್ರದೇಶ): ಮಾಧವ್ ನಗರ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತ ಜಿತೇಂದ್ರ ಶೀರೆ ಎಂಬುವವರು ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಲೆಂದು ಉಜ್ಜೈನ್ ಸಂಸದ ಅನಿಲ್ ಫಿರೋಜಿಯಾ ಆಸ್ಪತ್ರೆ ಬಳಿ ತೆರಳಿದ್ದರು. ಈ ವೇಳೆ ಮೃತ ಕಾರ್ಯಕರ್ತನ ಪತ್ನಿ ಮತ್ತು ಕುಟುಂಬಸ್ಥರು ಸಂಸದ ಅನಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ನನ್ನ ಪತಿ ಯಾವಾಗಲೂ ನಿಮಗಾಗಿ ಕೆಲಸ ಮಾಡಿದ್ದರು. ನೀವು ಅವರ ಸಹಾಯಕ್ಕಾಗಿ ಏಕೆ ಬರಲಿಲ್ಲ. ನೀವೀಗ ಈಗ ಇಲ್ಲಿಗೆ ಏಕೆ ಬಂದಿದ್ದೀರಿ, ನಮ್ಮನ್ನು ಬಿಟ್ಟು ಬಿಡಿ ಎಂದು ಗೋಳಾಗಿದ್ದಾರೆ".