17ರ ಪೋರ 7ವರ್ಷದ ಬಾಲಕನ ಅಪಹರಿಸಿದ.. ಸಣ್ಣ ವಯಸ್ಸಿಗೇ ಅಪರಾಧಿಯಾದ! - 17ರ ಪೋರನಿಂದ 7 ವರ್ಷದ ಬಾಲಕ ಅಪಹರಣ
🎬 Watch Now: Feature Video
7ವರ್ಷದ ಬಾಲಕನನ್ನು 17ವರ್ಷದ ಪೋರ ಅಪಹರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ. ರಾಚಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ವರ್ಷದ ಅರ್ಜುನ್ ಮನೆ ಬಳಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ. ಬಳಿಕ ಅರ್ಜುನ್ ಪೋಷಕರಿಗೆ ಅನಾಮಿಕ ಕರೆಯೊಂದು ಬಂದಿತ್ತು. ‘ನಿಮ್ಮ ಮಗ ಬೇಕಾದ್ರೆ 3 ಲಕ್ಷ ರೂ. ನೀಡು. ಇಲ್ಲವಾದಲ್ಲಿ ಆತನ ಕೊಲೆ ಮಾಡುವುದಾಗಿ’ ಬೆದರಿಕೆಯೊಡ್ಡಿದ್ದನು. ಮಗ ಕಿಡ್ನಾಪ್ ಆಗಿರುವುದರಿಂದ ಕಕ್ಕಾಬಿಕ್ಕಿಯಾದ ಬಾಲಕನ ತಂದೆ ಸ್ನೇಹಿತರ ಸಹಾಯದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದನು. ಪೊಲೀಸರು ಮೊಬೈಲ್ ನಂಬರ್ ಟ್ರೇಸ್ ಮಾಡಿ ಆರೋಪಿಯನ್ನು ಪತ್ತೆ ಹಚ್ಚಿದ್ದಾಗ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಕಾರಣ ಅಪಹರಿಸಿದವ ಕೇವಲ 17 ವರ್ಷದ ಬಾಲಕನಾಗಿದ್ದನು. ಆ ಬಾಲಕ ಮೇಲೆ ಈಗಾಗಲೇ ಕೆಲ ಪ್ರಕರಣ ಇವೆ. ಪ್ರಕರಣವೊಂದರಲ್ಲಿ ಬಾಲಾಪರಾಧಿಯಾಗಿದ್ದನು. ತಿಂಗಳ ಹಿಂದೆ ಲಕ್ಷ ರೂ. ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈಗ ಈ ಘಟನೆ ಮೂಲಕ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.