ಸೈಕಲ್ ಏರಿ ಸಂಸತ್ ಅಧಿವೇಶನಕ್ಕೆ ಬಂದ ಸಂಸದ ಮನೋಜ್ ತಿವಾರಿ... ಯಾಕೆ ಗೊತ್ತಾ? - BJP MP Manoj Tiwari arrives at the Parliament riding a bicycle
🎬 Watch Now: Feature Video
ದೆಹಲಿ: ಈಶಾನ್ಯ ದೆಹಲಿಯ ಬಿಜೆಪಿ ಸಂಸದ ಮನೋಜ್ ತಿವಾರಿ ಇಂದು ಆರಂಭಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಬೈಸಿಕಲ್ ಏರಿ ಬಂದು ಅಚ್ಚರಿ ಮೂಡಿಸಿದರು. ವಾಯು ಮಾಲಿನ್ಯದಿಂದಾಗಿ ದೆಹಲಿ ವಾತಾವರಣ ಹಾಳಾಗಿದೆ. ರಾಜಧಾನಿಯ ಜನತೆ ವಿಷ ಗಾಳಿಯನ್ನೇ ಉಸಿರಾಡುವಂತಾಗಿದೆ. ಹೀಗಾಗಿ ದೆಹಲಿ ವಾತಾವರಣ ಉಳಿಸಿ, ಇಲ್ಲಿನ ಜನತೆಗೆ ಸಮಗ್ರ ನೀರಿನ ಪೂರೈಕೆ ಮಾಡಬೇಕೆಂದು ತಿವಾರಿ, ದೆಹಲಿ ಸಿಎಂ ಕೇಜ್ರಿವಾಲ್ಗೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಿವಾರಿ ಬೈಸಿಕಲ್ ಏರಿ ಬಂದಿದ್ದಾರಂತೆ.