ಟೋಕಿಯೋ ಪ್ಯಾರಾಲಿಂಪಿಕ್ಸ್: ಪದಕವನ್ನು ಭಾರತೀಯರಿಗೆ ಅರ್ಪಿಸಿದ ಬೆಳ್ಳಿ ಹುಡುಗಿ ಭಾವಿನಾ - ಟೇಬಲ್ ಟೆನ್ನಿಸ್
🎬 Watch Now: Feature Video
ಟೋಕಿಯೋ(ಜಪಾನ್): ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಟೇಬಲ್ ಟೆನ್ನಿಸ್ ಆಟಗಾರ್ತಿ ಭಾವಿನಾ ಪಟೇಲ್ ಬೆಳ್ಳಿ ಪದಕ ಗೆದ್ದಿದ್ದು, ದೇಶದಾದ್ಯಂತ ಜನರು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಭಾವಿನಾ, ನನಗೆ ಚಿನ್ನ ಗೆಲ್ಲುವ ಆತ್ಮವಿಶ್ವಾಸವಿತ್ತು. ಆದರೆ ಶೇ.100ರಷ್ಟು ಪ್ರದರ್ಶನ ನೀಡಲು ನನ್ನಿಂದ ಸಾಧ್ಯವಾಗಿಲ್ಲ. ಇದಕ್ಕಾಗಿ ನನಗೆ ತೃಪ್ತಿಯಿಲ್ಲ. ಸ್ವಲ್ಪ ದುಃಖವೂ ಇದೆ. ಆದರೆ ಮುಂದಿನ ಪಂದ್ಯಾವಳಿಯಲ್ಲಿ ಕನಸು ಪೂರೈಸುವ ಪ್ರಯತ್ನ ಮಾಡುವೆ. ನಾನು ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಲು ಅನೇಕರು ನನಗೆ ಸಹಾಯ ಮಾಡಿದ್ದಾರೆ, ಅವರೆಲ್ಲರಿಗೂ ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಈ ಪದಕವನ್ನು ಭಾರತದ ಜನತೆಗೆ ಹಾಗೂ ನನಗೆ ಬೆಂಬಲ ನೀಡಿದವರಿಗೆ ಅರ್ಪಿಸುತ್ತೇನೆ ಎಂದರು.