ಕುದಿಯುವ ಸಾಂಬಾರ್​ನಲ್ಲಿ ಬಿದ್ದ ಮಗು... ಪಾಲಕರ ನಿರ್ಲಕ್ಷಕ್ಕೆ ಬಲಿಯಾಯ್ತು ಕಂದಮ್ಮ!? - ಸಂಗಾರೆಡ್ಡಿಯಲ್ಲಿ ಸಾಂಬಾರ್​ನಲ್ಲಿ ಬಿದ್ದು ಮಗು ಸಾವು

🎬 Watch Now: Feature Video

thumbnail

By

Published : Nov 21, 2019, 9:25 PM IST

ಆ ಒಂದು ನಿರ್ಲಕ್ಷ್ಯ ಬಾಲಕನ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಮಕ್ಕಳ ಬಗ್ಗೆ ಜಾಗೃತರಾಗಿರಬೇಕಾಗಿದ್ದ ಪೋಷಕರು ಮೈಮರೆತರೇ ಏನಾಗುತ್ತೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಂಗಾರೆಡ್ಡಿ ಜಿಲ್ಲೆಯ ಸಿರಿಪಲ್ಲಿ ಗ್ರಾಮದ ನಿವಾಸಿ ಸುರೇಶ್​ ತನ್ನ ಮೂರು ವರ್ಷದ ಮಗ ಹರೀಶ್​ ಜೊತೆ ರಂಗಾರೆಡ್ಡಿ ಜಿಲ್ಲೆಯ ಸರ್ದಾರಣಗರ್​ ಗ್ರಾಮದ ಬಂಧುಗಳ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಅಲ್ಲಿ ಹರೀಶ್​ ಮೇಲೆ ಬಿಸಿ ಬಿಸಿ ಸಾಂಬಾರ್​ ಬಿದ್ದಿದೆ. ತೀವ್ರ ಗಾಯಗೊಂಡಿದ್ದ ಹರೀಶ್​ನನ್ನು ಹೈದರಾಬಾದ್​ನ ಉಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.