ಸಿಎಂ ನಿತೀಶ್ ಕುಮಾರ್ ಕಾಲಿಗೆ ನಮಸ್ಕರಿಸಿದ ಲಾಲೂ ಸೊಸೆ ಐಶ್ವರ್ಯ ರಾಯ್... ವಿಡಿಯೋ - ಬಿಹಾರ ವಿಧಾನಸಭೆ ಚುನಾವಣೆ 2020
🎬 Watch Now: Feature Video
ಚಾಪ್ರಾ(ಬಿಹಾರ): ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದು, ಮಹತ್ವದ ಬೆಳವಣಿಗೆಯೊಂದರಲ್ಲಿ ಲಾಲು ಪ್ರಸಾದ್ ಯಾದವ್ ಸೊಸೆ ಐಶ್ವರ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾಲಿಗೆ ನಮಸ್ಕಾರ ಮಾಡಿರುವ ಘಟನೆ ನಡೆದಿದೆ. ಚಾಪ್ರಾ ಕ್ಷೇತ್ರದಿಂದ ಐಶ್ವರ್ಯ ರಾಯ್ ಅವರ ತಂದೆ ಚಂದ್ರಿಕಾ ರಾಯ್ ಸ್ಪರ್ಧೆ ಮಾಡಿದ್ದು, ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಮಿಸಿದ್ದರು. ಈ ವೇಳೆ ತೇಜ್ ಪ್ರತಾಪ್ ಅವರ ಪತ್ನಿಯಾಗಿರುವ ಚಂದ್ರಿಕಾ ರಾಯ್ ಕೂಡ ಆಗಮಿಸಿದ್ದರು. ಐಶ್ವರ್ಯ 2018ರಲ್ಲಿ ತೇಜ್ ಪ್ರತಾಪ್ ಯಾದವ್ ಅವರನ್ನು ವಿವಾಹವಾಗಿದ್ದರು. ಆದರೆ, ವಿವಾಹವಾಗಿ ಕೇವಲ ಐದು ತಿಂಗಳ ನಂತರ ವಿಚ್ಛೇದನಕ್ಕೆ ತೇಜ್ ಪ್ರತಾಪ್ ಅರ್ಜಿ ಸಲ್ಲಿಸಿದ್ದರು. ಇದರಿಂದ ಎರಡು ಕುಟುಂಬಗಳ ನಡುವಿನ ಸಂಬಂಧ ತೀವ್ರವಾಗಿ ಹದಗೆಟ್ಟಿತ್ತು. ಇದರಿಂದ ಚಂದ್ರಿಕಾ ರಾಯ್ ಆರ್‌ಜೆಡಿ ತೊರೆದು ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದ್ದಾರೆ.